
ಉದಯವಾಹಿನಿ ವಡಗೇರಾ : 2024-25ನೇ ಸಾಲಿನ ಕೆ.ಕೆ.ಆರ್.ಡಿ.ಬಿ. ಯೋಜನೆಯಡಿಯಲ್ಲಿ ವಡಗೇರಾ ತಾಲೂಕಿನ ಬಿಳಾರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 4 ಕೋಣೆಗಳು ಸುಮಾರು 50 ಲಕ್ಷ ರೂಪಾಯಿಗಳಲ್ಲಿ ನಿರ್ಮಾಣ ಹಾಗೂ ತಾಲೂಕಿನ ಕಂದಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 70 ಲಕ್ಷ ರೂಪಾಯಿಗಳ ವೆಚ್ಚದ ಕಾಮಗಾರಿಗಳಾದ ತಡೆಗೋಡೆ ನಿರ್ಮಾಣ ವಿದ್ಯಾರ್ಥಿಗಳಿಗೆ ಊಟದ ಕೋಣೆ ಮತ್ತು ವಿದ್ಯಾರ್ಥಿಗಳಿಗಾಗಿ ಹೈಟೆಕ್ ಶೌಚಾಲಯ ಕಟ್ಟಡದ ಕಾಮಗಾರಿಗಳ ಭೂಮಿ ಪೂಜೆಯನ್ನು ಯಾದಗಿರಿ ಮತಕ್ಷೇತ್ರದ ಶಾಸಕರಾದ ಚನ್ನಾರೆಡ್ಡಿ ಪಾಟೀಲ್ ತುನ್ನೂರ ಅವರು ನೆರವೇರಿಸಿ ಮಾತನಾಡಿದರು. ಗ್ರಾಮೀಣ ಭಾಗದ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ಸರಕಾರಿ ಕನ್ನಡ ಶಾಲೆಗಳ ಅಭಿವೃದ್ಧಿಗೆ ನಾನು ಬದ್ಧ ವಿದ್ಯಾರ್ಥಿಗಳು ಕೂಡಾ ಸರಕಾರದ ಸದುಪಯೋಗವನ್ನು ಪಡೆದುಕೊಂಡು ಉತ್ತಮವಾಗಿ ವಿದ್ಯಾಭ್ಯಾಸ ಮಾಡಿ ತಾಲೂಕಿಗೂ ಜಿಲ್ಲೆಗೂ ಕೀರ್ತಿ ತರುವಂತೆ ಮಕ್ಕಳಿಗೆ ಕಿವಿಮಾತು ಹೇಳಿದರು. ತಾಲೂಕಿನ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುವುದರ ಜೊತೆಗೆ ನೂತನ ತಾಲೂಕಿಗೆ ಹೆಚ್ಚಿನ ಅನುದಾನ ತಂದು ತಾಲೂಕಿನಲ್ಲಿ ಸರ್ಕಾರಿ ಕಚೇರಿಗಳ ಆರಂಭಕ್ಕೆ ನಮ್ಮ ಮುಖ್ಯಮಂತ್ರಿಗಳಿಗೆ ಮತ್ತೊಮ್ಮೆ ಭೇಟಿ ಮಾಡಿ ಮನವೊಲಿಸಿ ಆದಷ್ಟು ಬೇಗನೆ ಸರ್ಕಾರಿ ಕಚೇರಿಗಳ ಆರಂಭಕ್ಕೆ ಮುಂದಾಗುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಪಂಚ ಗ್ಯಾರಂಟಿಗಳ ಅನುಷ್ಠಾನ ಸಮಿತಿ ಜಿಲ್ಲಾ ಉಪಾಧ್ಯಕ್ಷ ಬಸ್ಸುಗೌಡ ಬಿಳಾರ,ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಚಮರೆಡ್ಡಿ ಬೆನಕನಳ್ಳಿ, ಮಲ್ಲಣ್ಣಗೌಡ ರಾಚರೆಡ್ಡಿ ,ಚಂದ್ರುಗೌಡ ಕಂದಳ್ಳಿ, ಗ್ರಾ. ಪಂ. ಸದಸ್ಯ ತಿಪ್ಪಣ್ಣ ಪೂಜಾರಿ, ಮಲ್ಲಣ್ಣಗೌಡ ಗೌಡರೆಡ್ಡಿ, ಬಸವರಾಜ ಗೌಡ ಮಾಚ್ನೂರ, ಮಾಳಿಂಗರಾಯ ಕಂದಳ್ಳಿ, ಅಬ್ದುಲ್ ಚಿಗನೂರ, ನಿಂಗಪ್ಪ ಬಿಳಾರ, ಅಯ್ಯಪ್ಪ, ರೇವಣಸಿದ್ದಪ್ಪ, ಹೂವಣ್ಣ ಪೂಜಾರಿ, ನಿರ್ಮಿತಿ ಕೇಂದ್ರ ಇಲಾಖೆಯ ನಾಗೇಶ್ ರಾವ್ ಕುಲಕರ್ಣಿ, ಪಿಡಿಓ ಹಣಮಂತಪ್ಪ ಮತ್ತು ಗ್ರಾಮಸ್ಥರು ಹಾಗೂ ಇನ್ನಿತರರು ಉಪಸ್ಥಿತರಿದ್ದರು
