ಉದಯವಾಹಿನಿ, ರಾಯಚೂರು: ರಾಜ್ಯದಲ್ಲಿ ಈಗಾಗಲೇ ವಕ್ಫ್ ವಿವಾದ ತಾರಕಕ್ಕೇರಿ ತಣ್ಣಗಾಗುತ್ತಿರುವ ಬೆನ್ನಲ್ಲಿಯೇ ರಾಯಚೂರಿನಲ್ಲಿ ಅನಧಿಕೃತ ಕಟ್ಟಡಗಳ ತೆರವು ಹೆಸರಿನಲ್ಲಿ ಸ್ಥಳೀಯ ಆಡಳಿತ ಸಂಸ್ಥೆಯು ರಾತ್ರೋ ರಾತ್ರಿ ಶಿವ ಮತ್ತು ಗಣೇಶ ದೇವಾಲಯಗಳನ್ನು ತೆರವುಗೊಳಿಸಿ ನೆಲಸಮ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ರಾಜ್ಯದಲ್ಲಿ ಮುಸ್ಲಿಂ ಸಮುದಾಯದ ವಕ್ಫ್ ಮಂಡಳಿಗೆ ಲಕ್ಷಾಂತರ ಎಕರೆ ರೈತರ ಭೂಮಿ, ದೇವಾಲಯಗಳು, ಮಂದಿರಗಳು, ಕೋಟೆಗಳು ಹಾಗೂ ಸಾರ್ವಜನಿಕ ಸ್ಥಳಗಳ ಜಾಗಗಳು ಸೇರಿವೆ ಎಂದು ಆಸ್ತಿ ದಾಖಲೆಗಳಲ್ಲಿ ತಿದ್ದುಪಡಿ ಮಾಡಿರುವುದಕ್ಕೆ ಸರ್ಕಾರದ ವಿರುದ್ಧ ಜನರು ಆಕ್ರೋಶ ಹೊರಹಾಕುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಇದೀಗ ರಾಯಚೂರಿನ ಸಂತೋಷ ನಗರ ಬಡಾವಣೆಯಲ್ಲಿ ಶಿವ ಮತ್ತು ಗಣೇಶ ದೇವಸ್ಥಾನಗಳನ್ನು ರಾತ್ರೊರಾತ್ರಿ ಜೆಸಿಬಿಯಿಂದ ತೆರವುಗೊಳಿಸಿ ನೆಲಸಮ ಮಾಡಲಾಗಿದೆ. ಈ ಘಟನೆ ಕುರಿತು ಹಲವು ಹಿಂದೂಪರ ಸಂಘಟನೆಗಳ ನಾಯಕರು ಸ್ಥಳೀಯ ನಗರಸಭೆ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಸುಭಾಷ್ ನಗರದಲ್ಲಿ ಸರ್ಕಾರಿ ಪ್ರೌಢಶಾಲೆ ನಿರ್ಮಾಣ ಮಾಡಲು ಮಂಜುರಾಗಿದ್ದ ಸಿಎ ಸೈಟ್ ನಲ್ಲಿ ಕೆಲವರು ಜಾಗ ಕಬಳಿಸಿ, ಶಿವ ಮತ್ತು ಗಣೇಶ ದೇವಸ್ಥಾನ ನಿರ್ಮಾಣ ಮಾಡಿದ್ದರು. ಆದರೆ, ಸರ್ಕಾರದಿಂದ ದೇವಾಲಯ ತೆರವುಗೊಳಿಸಲು ನೋಟೀಸ್ ಅಂಟಿಸಿದಾಗ ಸ್ಥಳೀಯ ಜನರು ಹಾಗೂ ವಿವಿಧ ಸಂಘಟನೆಗಳಿಂದ ಪ್ರತಿಭಟನೆಗಳನ್ನು ಮಾಡಲಾಗಿತ್ತು. ಆದರೆ, ಇದನ್ನು ಲೆಕ್ಕಿಸದೇ ಜೆಸಿಬಿಯಿಂದ ದೇವಾಲಯ ತೆರವು ಕಾರ್ಯಾಚರಣೆಗೆ ಬಂದಾಗಲೂ ಜನರು ಅಡ್ಡಿಪಡಿಸಿದ್ದರು. ಹೀಗಾಗಿ, ಸ್ಥಳೀಯ ನಗರಸಭೆಅಧಿಕಾರಿಗಳಿಗೆ ಇದೊಂದು ಸವಾಲಿನ ಕೆಲಸವಾಗಿ ಪರಿಣಮಿಸಿತ್ತು.

Leave a Reply

Your email address will not be published. Required fields are marked *

error: Content is protected !!