ಉದಯವಾಹಿನಿ, ಆನೇಕಲ್ : ಕನ್ನಡ ರಾಜ್ಯೋತ್ಸವ ನವೆಂಬರ್ ತಿಂಗಳಿಗೆ ಸೀಮಿತವಾಗದೆ ನಿತ್ಯೋತ್ಸವವಾಗಿ ನಮ್ಮಲ್ಲಿ ರೂಡಿಯಾಗಬೇಕು ಎಂದು ಕೇಂದ್ರ ಮಾಜಿ ಸಚಿವ ಎ.ನಾರಾಯಸ್ವಾಮಿ ರವರು ತಿಳಿಸಿದರು. ಅತ್ತಿಬೆಲೆ ಸರ್ಕಾರಿ ಬಾಲಕರ ಪ್ರಾಥಮಿಕ ಪಾಠ ಶಾಲೆಯ ಆವರಣದಲ್ಲಿ ಗಡಿನಾಡು ಕನ್ನಡ ಯುವ ಸೇನೆಯ ಸಂಸ್ಥಾಪಕ ಅಧ್ಯಕ್ಷರಾದ ನಾಗರಾಜ್ ಸೋನಿರವರ ನೇತೃತ್ವದಲ್ಲಿ ನಡೆದ ೬೯ ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಬಾಗವಹಿಸಿ ಮಾತನಾಡಿದರು. ಕನ್ನಡದ ಬಗ್ಗೆ ನಮ್ಮಲ್ಲಿ ಅಭಿಮಾನ ಇರಬೇಕು. ಹಾಗೆಯೇ ನಮ್ಮ ಸಂಸ್ಕೃತಿ. ನಾಡು ನುಡಿಯಯ ಬಗ್ಗೆ ಹೆಮ್ಮೆ ಪಡಬೇಕು. ಕನ್ನಡಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಕನ್ನಡಕ್ಕೆ ಎಂಟು ಜ್ಞಾನ ಪೀಠ ಪ್ರಶಸ್ಥಿ ಬಂದಿದೆ. ಕನ್ನಡಕ್ಕೆ ತನ್ನದೇ ಆದ ಶಕ್ತಿ ಇದೆ, ಕನ್ನಡ ಬಾಷೆ ತಾಯಿ ಬಾಷೆ, ಅದು ಹೃದಯ ಬಾಷೆಯಾಗಿದೆ ಎಂದು ಬಣ್ಣಿಸಿದರು. ಇನ್ನು ಕರ್ನಾಟಕ ಮತ್ತು ತಮಿಳುನಾಡಿನ ಗಡಿಬಾಗ ಅತ್ತಿಬೆಲೆಯಾಗಿದ್ದು ನಾಡು. ನುಡಿ ನೆಲ.ಜಲ. ಬಾಷೆ ವಿಚಾರವಾಗಿ ತೊಂದರೆಯಾದಾಗ ಈಬಾಗದಲ್ಲಿ ಮೊದಲಿಗೆ ಬೀದಿಗೆ ಇಳಿಯುವುದು ನಾಗರಾಜ್ ಸೋನಿರವರು ಮತ್ತು ಮಂಜುನಾಥ್ ದೇವು ರವರು ಎಂದು ತಿಳಿಸಿದರು.
ಗಡಿನಾಡು ಕನ್ನಡ ಯುವ ಸೇನೆಯ ಸಂಸ್ಥಾಪಕ ಅಧ್ಯಕ್ಷರಾದ ನಾಗರಾಜ್ ಸೋನಿರವರು ಮಾತನಾಡಿ ಆನೇಕಲ್ ತಾಲ್ಲೂಕಿನಲ್ಲಿ ನಾಲ್ಕು ಕೈಗಾರಿಕೆ ಪ್ರದೇಶಗಳಲ್ಲಿದ್ದರು ಸ್ಥಳೀಯ ಕನ್ನಡಿಗರಿಗೆ ಉದ್ಯೋಗ ನೀಡುವಲ್ಲಿ ಮೀನ ಮೇಷ ಮಾಡುತ್ತಿರುವುದು ಸರಿಯಲ್ಲ ಮುಂದಿನ ದಿನಗಳಲ್ಲಿ ಕಾರ್ಖಾನೆ ಮಾಲೀಕರಿಗೆ ತಕ್ಕ ಉತ್ತರ ನೀಡುತ್ತೇವೆ ಎಂದರು.
ನೆರೆ ರಾಜ್ಯಗಳಿಂದ ಬಂದು ನಮ್ಮ ತಾಲ್ಲೂಕಿನಲ್ಲಿ ನೆಲೆಸಿರುವ ಅನ್ಯ ಬಾಷಿಕರು ಕನ್ನಡ ಕಲಿತು. ಕನ್ನಡ ಬಾಷೆಯಲ್ಲಿಯೇ ವ್ಯವಹರಿಸಬೇಕು ಎಂದರು. ಗಡಿನಾಡು ಕನ್ನಡ ಯುವ ಸೇನೆಯ ಕಳೆದ ಹತ್ತಾರು ವರ್ಷಗಳಿಂದ ನಾಡು. ನುಡಿ ನೆಲ.ಜಲ. ಬಾಷೆ ವಿಚಾರವಾಗಿ ತೊಂದರೆಯಾದಾಗ ಬೀದಿಗೆ ಇಳಿದು ಹೋರಾಟವನ್ನು ಮಾಡುತ್ತಿದ್ದೇವೆ ಜೊತೆಗೆ ಜನರಲ್ಲಿ ಕನ್ನಡ ಅಭಿಮಾನಿಮಾನವನ್ನು ಬೆಳೆಸುತ್ತಿದ್ದೇವೆ ಎಂದು ಹೇಳಿದರು.
