ಉದಯವಾಹಿನಿ, ಬೆಂಗಳೂರು: ರೆಬಲ್ ಸ್ಟಾರ್ ಅಂಬರೀಶ್ರವರ 6ನೇ ಪುಣ್ಯಸರಣೆಯ ಅಂಗವಾಗಿ ಕಂಠೀರವ ಸ್ಟುಡಿಯೋದಲ್ಲಿರುವ ಸಮಾಧಿಗೆ ಪೂಜೆ ಸಲ್ಲಿಸಲಾಯಿತು.ಮಾಜಿ ಸಂಸದೆ ಸುಮಲತಾ ಅಂಬರೀಶ್, ಮಗ ಅಭಿಷೇಕ್, ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಸೇರಿದಂತೆ ಹಲವರು ತೆರಳಿ ಸಮಾಧಿಗೆ ವಿಶೇಷ ಪೂಜೆ ಸಲ್ಲಿಸಿದರು. ಹಿರಿಯ ನಟ ದೊಡ್ಡಣ್ಣ ಸೇರಿದಂತೆ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸುಮಲತಾ, ಅಂಬರೀಶ್ ಅವರ 6ನೇ ಪುಣ್ಯಸರಣೆ ನಡೆಯುತ್ತಿದೆ. ಆದರೆ ನಮ ಕುಟುಂಬದಲ್ಲಿ ಮತ್ತು ಅಭಿಮಾನಿಗಳಲ್ಲಿ ಅಂಬರೀಶ್ ಸದಾ ಚಿರಸ್ಥಾಯಿ ಯಾಗಿರುತ್ತಾರೆ. ಅವರ ನೆನಪು ಯಾವಾಗಲೂ ನಮೊಂದಿಗಿದೆ ಎಂದರು.
ಮೊಮಗನ ರೂಪದಲ್ಲಿ ಅಂಬರೀಶ್ ಮರಳಿ ಬಂದಂತಿದೆ. ಬಹಳ ವರ್ಷಗಳ ನಿರೀಕ್ಷೆಯ ಬಳಿಕ ಮೊಮಗ ಹುಟ್ಟಿದ್ದಾನೆ. ಮಗು ನೋಡಲು ಅಂಬರೀಶ್ ಅವರ ರೀತಿಯೇ ಇದೆ ಎಂದು ಎಲ್ಲರೂ ಹೇಳುತ್ತಿದ್ದಾರೆ. ಇದು ಹೊಸ ಅನುಭವ ಎಂದು ಹೇಳಿದರು.
ಮಗುವಿನ ನಾಮಕರಣಕ್ಕೆ ಹೆಸರು ಹುಡುಕಲಾಗುತ್ತಿದೆ. ಮನೆದೇವರಿಗೆ ಪೂಜೆ ಸಲ್ಲಿಸಿ ನಂತರ ತಿಂಗಳ ಬಳಿಕ ಮಗುವನ್ನು ಹೊರಗೆ ಕರೆತರಲಾಗುತ್ತದೆ ಎಂದರು.ರಾಜಕೀಯ ವಿಚಾರಗಳ ಬಗ್ಗೆ ಪ್ರತಿಕ್ರಿಯಿಸಿದ ಸುಮಲತಾ, ಉಪಚುನಾವಣೆಗಳು ಆಡಳಿತಾರೂಢ ಪಕ್ಷಕ್ಕೆ ಅನುಕೂಲವಾಗಿರುತ್ತದೆ. ಮೂರೂ ಕ್ಷೇತ್ರಗಳ ಫಲಿತಾಂಶದಲ್ಲಿ ದೊಡ್ಡ ಬದಲಾವಣೆಯಾಗಿದೆ ಎಂಬ ವಿಶ್ಲೇಷಣೆ ಅನಗತ್ಯ ಎಂದು ಹೇಳಿದರು.

ಯಾವುದೇ ಪಕ್ಷವಾದರೂ ಚುನಾವಣೆಯಲ್ಲಿ ಗೆಲ್ಲಬೇಕು ಎಂದೇ ಹೋರಾಟ ಮಾಡಲಾಗುತ್ತದೆ. ಸೋಲಿನ ಬಗ್ಗೆ ವಿಶ್ಲೇಷಣೆ ನಡೆಸಿ ಸರಿಪಡಿಸಲು ಕ್ರಮ ಕೈಗೊಳ್ಳುವ ಅಗತ್ಯ ಇದೆ. ಕುಮಾರಸ್ವಾಮಿ ಈಗ ಎನ್ಡಿಎ ಮೈತ್ರಿಯಲ್ಲಿದ್ದಾರೆ. ಈ ಕ್ಷಣದಲ್ಲಿ ನಾನು ಅವರ ಬಗ್ಗೆ ಮಾತನಾಡಲು ಬಯಸುವುದಿಲ್ಲ ಎಂದರು.

Leave a Reply

Your email address will not be published. Required fields are marked *

error: Content is protected !!