ಉದಯವಾಹಿನಿ, ಕೋಲಾರ: ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥಸ್ವಾಮಿ ಲಕ್ಷ ದಿಪೋತ್ಸವದ ಅನ್ನದಾನಕ್ಕೆ ಒಂದು ಲಾರಿ ಲೋಡ್‌ನಷ್ಟು ತರಕಾರಿಗಳು ಹಾಗೂ ದವಸಧಾನ್ಯ ಸಮರ್ಪಿಸುವ ಕಾರ್ಯಕ್ಕೆ ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ಚಾಲನೆ ನೀಡಿದರು.
ನಗರದ ಎ.ಪಿ.ಎಂ.ಸಿ ಹಾಗೂ ವಡಗೂರು ಗೇಟ್‌ನ ಮಂಡಿ ಮಾಲೀಕರು, ರೈತರು, ವ್ಯಾಪಾರಸ್ಥರು ಹಾಗೂ ಕೂಲಿಕಾರ್ಮಿಕರು ಸೇರಿಕೊಂಡು ಪ್ರತಿ ವರ್ಷದಂತೆ ಈ ಬಾರಿಯ ೧೪ನೇ ವರ್ಷದ ಅಂಗವಾಗಿ ೩೦೦ ಬಾಕ್ಸ್ ಟೊಮೆಟೋ, ೩೫೦ ಚೀಲ ಅಕ್ಕಿ ಹಾಗು ವಿವಿಧ ರೀತಿಯ ತರಕಾರಿಗಳು ಹಾಗೂ ಧವಸಧಾನ್ಯ ಧರ್ಮಸ್ಥಳಕ್ಕೆ ಕಳುಹಿಸಲಾಯಿತು.ಮುಖಂಡರಾದ ಬಣಕನಹಳ್ಳಿ ನಟರಾಜ್, ಸಮೃದ್ಧಿ ಸುಧಾಕರ್, ಕರವೇ ರೈತ ಘಟಕದ ಜಿಲ್ಲಾಧ್ಯಕ್ಷ ಹಾಗೂ ಜೆ.ಆರ್.ಎಂ ಟ್ರಾನ್ಸ್‌ಪೋರ್ಟ್ ಮಾಲೀಕರು ಆಗಿರುವ ವಡಗೂರು ಶಂಕರರೆಡ್ಡಿ, ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ವಡಗೂರು ಡಿ.ವಿ.ಮಂಜುನಾಥಗೌಡ, ಕರವೇ ತಾಲೂಕು ಅಧ್ಯಕ್ಷ ಯಾರಂಘಟ್ಟ ಆರ್.ಶಶಿಕುಮಾರ್, ಜಿಲ್ಲಾ ಕಾರ್ಯದರ್ಶಿ ಯಾನಾದಹಳ್ಳಿ ಎನ್.ಮಂಜುನಾಥ್ ಇದ್ದರು.
