ಉದಯವಾಹಿನಿ, ಬೆಂಗಳೂರು: ಫೆಂಗಲ್ ಚಂಡಮಾರುತ ಬಿಸಿ ರಾಜಧಾನಿ ಬೆಂಗಳೂರಿಗೂ ತಟ್ಟಿದ್ದು, ಭಾನುವಾರ ರಾತ್ರಿಯಿಂದ ಸೋಮವಾರವೂ ಅಬ್ಬರಿಸಿ ಸುರಿದ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡರೆ, ಹಳೆಯ ಮನೆವೊಂದು ನೆಲಕ್ಕೆ ಉರುಳಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ.
ಒಂದೆಡೆ ಮಳೆ ಮತ್ತೊಂದೆಡೆ ಮೈಕೊರೆಯುವ ಚಳಿಯಿಂದಾಗಿ ಬೆಂಗಳೂರಿಗರು ಹೈರಾಣರಾಗಿದ್ದಾರೆ.
ಮಳೆಯಿಂದಾಗಿ ಚಳಿತಾಳದೆ ವ್ಯಕ್ತಿಯೊಬ್ಬ ಬೆಡ್‌ಶೀಟ್ ಹೊದ್ದುಕೊಂಡು ನಿದ್ದೆಗೆ ಜಾರಿರುವುದು. ಇಂದು ಬೆಳಗಿನಿಂದ ಮೋಡ ಕವಿದ ವಾತಾವರಣ ಹಾಗೂ ಆಗಾಗ ಮಳೆಯಾಗಿದ್ದರಿಂದ ಜನರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಕನಿಷ್ಠ ಮತ್ತು ಗರಿಷ್ಠ ತಾಪಮಾನದಲ್ಲಿ ಕುಸಿತವಾಗಿ ಕೂಡ ಚಳಿ ಹೆಚ್ಚಾಗುತ್ತಿದೆ. ಬಹುತೇಕ ಪ್ರದೇಶಗಳಲ್ಲಿ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ.
