ಉದಯವಾಹಿನಿ ,ನವದೆಹಲಿ: ಮನೆಗೆ ನುಗಿರುವ ದುಷ್ಕರ್ಮಿಗಳು ದಂಪತಿ ಮತ್ತು ಅವರ ಮಗಳನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ನೆಬ್ ಸರೈಪ್ರದೇಶದಲ್ಲಿ ನಡೆದಿದೆ.ಮೃತರನ್ನು ನಿವೃತ್ತ ಸೇನಾಧಿಕಾರಿ ರಾಜೇಶ್ ಕುಮಾರ್ (51), ಅವರ ಪತ್ನಿ ಕೋಮಲ್ (46) ಮತ್ತು ಅವರ ಪುತ್ರಿ ಕವಿತಾ (23) ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಕಾರ, ದಂಪತಿಯ ಮಗ ಅರ್ಜುನ್ ಬೆಳಿಗ್ಗೆ 5:30 ರ ಸುಮಾರಿಗೆ ಬೆಳಿಗ್ಗೆ ವಾಕಿಂಗ್ ಮುಗಿಸಿ ಹಿಂತಿರುಗಿದಾಗ ತಂದೆ-ತಾಯಿಶವ ಪತ್ತೆಯಾಗಿ ಆತಂಕಗೊಂಡಿದ್ದಾರೆ ನಂತರ ನೆರೆಹೊರೆಯವನ್ನು ಸಹಾಯಕ್ಕೆ ಕೂಗಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ದಾವಿಸಿದ ಪೊಲೀಸರ ತಂಡ ಮತ್ತು ಫೋರೆನ್ಸಿಕ್ ತಂಡಗಳನ್ನು ಪರಿಶೀಲನೆ ನಡೆಸಿದ್ದಾರೆ.
ಪ್ರಾಥಮಿಕ ದೃಷ್ಟಿಯಲ್ಲಿ, ಯಾವುದೇ ದರೋಡೆ ಅಥವಾ ಮನೆಯಿಂದ ಯಾವುದೇ ವಸ್ತುಗಳನ್ನು ಕಳ್ಳತನ ಮಾಡಿಲ್ಲ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ. ಘಟನೆಯ ಕುರಿತು ಅರ್ಜುನ್ನ ಮಾವ ಸತೀಶ್ಕುಮಾರ್ ಮಾತನಾಡಿ, ರಾಜೇಶ್ ನನ್ನ ಸೋದರ ಮಾವ, ಘಟನೆಯ ಕುರಿತು ನನ್ನ ಸೋದರಳಿಯ (ಅರ್ಜುನ್) ನನಗೆ ಕರೆ ಬಂದಿತ್ತು. ರಾಜೇಶ್ ಸೇನೆಯಿಂದ ನಿವೃತ್ತಿ ಹೊಂದಿದ್ದು, ಅವರ ಮಗಳು ಕಾಲೇಜು ವಿದ್ಯಾರ್ಥಿನಿಯಾಗಿದ್ದಳು. ಹಣಕಾಸಿನ ವಿವಾದವೇ ದಾಳಿಗೆ ಸಂಭವನೀಯ ಉದ್ದೇಶವಾಗಿರಬಹುದು ಎಂದು ಕುಮಾರ್ ಶಂಕಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!