ಉದಯವಾಹಿನಿ, ಬೆಂಗಳೂರು: ಅಪಾರ್ಟ್ಮೆಂಟ್‌ವೊಂದರ ಮಾಲೀಕನ ಮಗ ಕಂಠಪೂರ್ತಿ ಕುಡಿದು ಯುವತಿಯೊಬ್ಬಳ ಜೊತೆ ಅಸಭ್ಯವಾಗಿ ವರ್ತಿಸಿರುವ ಸಂಬಂಧ ಸಂಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸಂಜಯ್‌ನಗರ ಪ್ಲಾನೆಟ್ ವಿಸ್ತಾ ಅಪಾರ್ಟ್ಮೆಂಟ್‌ನಲ್ಲಿ ಘಟನೆ ನಡೆದಿದ್ದು, ಅಪಾರ್ಟ್ಮೆಂಟ್ ಮಾಲೀಕನ ಮಗ ಮಂಜುನಾಥ್ ಗೌಡ ವಿರುದ್ಧ ಪಶ್ಚಿಮ ಬಂಗಾಳ ಮೂಲದ ಯುವತಿ ದೂರು ದಾಖಲಿಸಿದ್ದು,ಪೊಲೀಸರು ಪ್ರಕರಣ ದಾಖಲಿಸಿ ತನಿಖೆಯನ್ನು ಕೈಗೊಂಡಿದ್ದಾರೆ.ಯುವತಿ ಫ್ಲಾಟ್‌ನಲ್ಲಿ ಬಾಡಿಗೆಗೆ ಇದ್ದಳು. ಪಾರ್ಸೆಲ್ ತೆಗೆದುಕೊಳ್ಳಲು ಗೇಟ್ ಬಳಿ ಬಂದವಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ಮಾಡಿ ಫ್ಲಾಟ್‌ಗೆ ಎಳೆದೊಯ್ಯಲು ಯತ್ನಿಸಿದ್ದಾಗಿ ಯುವತಿ ದೂರು ನೀಡಿದ್ದಾರೆ. ಕಳೆದ ಡಿ.೩ರ ರಾತ್ರಿ ೧೦:೩೦ಕ್ಕೆ ಪಾರ್ಸಲ್ ತೆಗೆದುಕೊಳ್ಳಲು ಗೇಟ್ ಬಳಿ ಯುವತಿ ಹೋಗಿದ್ದಳು. ಆಗ ಆರೋಪಿ ಮಂಜುನಾಥ್ ಆಕೆಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಆತ ಕುಡಿದಿದ್ದರಿಂದ ಏನೂ ಮಾತನಾಡದೇ ಯುವತಿ ಸುಮ್ಮನಾಗಿದ್ದಳು. ಮತ್ತೆ ಬೈಯುತ್ತಾ ಯುವತಿ ಕಪಾಳಕ್ಕೆ ಹೊಡೆದಿದ್ದಾನೆ.
ಅಲ್ಲದೇ ಬಿಗಿಯಾಗಿ ಕುತ್ತಿಗೆ ಹಿಡಿದಿದ್ದರಿಂದ, ತಪ್ಪಿಸಿಕೊಳ್ಳಲು ಹೋದಾಗ ಬೆರಳು ಕಚ್ಚಿ ಗಾಯಗೊಳಿಸಿದ್ದಾನೆ. ಆಗ ಆತನ ಮನೆಯೊಳಗೆ ಯುವತಿಯನ್ನು ಎಳೆದುಕೊಂಡು ಹೋಗಲು ಯತ್ನಿಸಿದ. ತಪ್ಪಿಸಿಕೊಂಡು ಹೋಗುವಾದ ಮತ್ತೆ ಬಲವಾಗಿ ಹೊಡೆದಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
