ಉದಯವಾಹಿನಿ, ಹನೂರು : ತಾಲೂಕಿನ ಮಲೆ ಮಹದೇಶ್ವರ ಬೆಟ್ಟಕ್ಕೆ ಹೋಗುವ ಮಾರ್ಗ ಮಧ್ಯೆ ವಡಕೆಹಳ್ಳ ಸಮೀಪ ಕಾಡಾನೆಯೆಂದು ರಸ್ತೆ ದಾಟುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಇದರ ಬಗ್ಗೆ ಸಾರ್ವಜನಿಕರು ಎಚ್ಚರಿಕೆಯಿಂದ ಸಂಚರಿಸಬೇಕಾಗಿದೆ ಎಂಬುದು ಪ್ರಾಣಿ ಪ್ರಿಯರ ಆಗ್ರಹಾ ವಾಗಿದೆ.
ಮಲೆ ಮಹದೇಶ್ವರ ಬೆಟ್ಟದ ವಡಕೆಹಳ್ಳದ ಸಮೀಪ ಕಂಡಂತ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಈ ಬಗ್ಗೆ ಪ್ರತಿ ನಿತ್ಯ ಸಂಚಾರ ಮಾಡುವ ವಾಹನ ಸವಾರರು ಹಾಗೂ ಪಾದಯಾತ್ರಿಗಳು ಎಚ್ಚರಿಕೆಯಿಂದ ಸಂಚರಿಸಬೇಕಾಗಿದೆ.
ಒಂಟಿ ಆನೆಯೊಂದು ಮಲೆ ಮಹದೇಶ್ವರ ಬೆಟ್ಟದ ಸುತ್ತಮುತ್ತ ರಸ್ತೆ ಬದಿಯಲ್ಲಿ ಮೇವಿಗಾಗಿ ಪದೇ ಪದೇ ಕಾಣಿಸಿಕೊಳ್ಳುತ್ತಿರುವ ಕಾರಣ ಸಾರ್ವಜನಿಕರು ಸುರಕ್ಷತೆಗಾಗಿ ಪಾದಯಾತ್ರೆ ಬರುವಂತ ಭಕ್ತಾದಿಗಳು ಹಗಲು ಸಮಯದಲ್ಲೇ ಗುಂಪು ಗುಂಪಾಗಿ ಪಾದಯಾತ್ರೆಯನ್ನು ಮಾಡಬೇಕು. ರಾತ್ರಿಯ ಸಮಯದಲ್ಲಿ ಪಾದಯಾತ್ರೆಯನ್ನು ಕೈಗೊಳ್ಳದೆ ಹಗಲಿನ ಸಮಯದಲ್ಲಿ ಪಾದಯಾತ್ರೆಯನ್ನು ಮುಂದುವರಿಸುವುದು ಒಳ್ಳೆಯದಾಗಿದೆ. ಆನೆ ಮೇವಿಗಾಗಿ ಪರಿತಪಿಸುತ ರಸ್ತೆಯ ಅಕ್ಕ ಪಕ್ಕ ಮೇವು ತಿನ್ನಲು ಬರುವ ಕಾರಣ ಯಾವುದೇ ವಾಹನ ಸವಾರರು ರಸ್ತೆಯಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸಿ ವಿಡಿಯೋ ಗಳಿಗಾಗಿ ನಿಲ್ಲಬಾರದು.
