ಉದಯವಾಹಿನಿ, ವೆಲ್ಲಿಂಗ್ಟನ್‌: ದಕ್ಷಿಣ ಪೆಸಿಫಿಕ್‌ ಮಹಾಸಾಗರದ ವನವಾಟು ತೀರದಲ್ಲಿ ಮಂಗಳವಾರ 7.3 ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪವು 57 ಕಿಲೋಮೀಟರ್‌ ಆಳದಲ್ಲಿ ಸಂಭವಿಸಿದೆ ಮತ್ತು ದ್ವೀಪ ರಾಷ್ಟ್ರದ ಅತಿದೊಡ್ಡ ನಗರವಾದ ಪೋರ್ಟ್‌ ವಿಲಾದಿಂದ ಪಶ್ಚಿಮಕ್ಕೆ 30 ಕಿಲೋಮೀಟರ್‌ ದೂರದಲ್ಲಿ ಕೇಂದ್ರೀಕೃತವಾಗಿತ್ತು.

ಕಂಪನದ ನಂತರ ಅದೇ ಸ್ಥಳದ ಬಳಿ 5.5ರ ತೀವ್ರತೆಯ ಕಂಪನ ರಿಕ್ಟರ್‌ ಮಾಪನದಲ್ಲಿ ದಾಖಲಾಗಿದೆ ಎಂದು ಅಮೆರಿಕದ ಹವಾಮಾನ ಇಲಾಖೆ ವರದಿ ಮಾಡಿದೆ. ಹಾನಿಯ ಬಗ್ಗೆ ತಕ್ಷಣವೇ ಸ್ಪಷ್ಟವಾಗಿಲ್ಲ, ಆದರೆ ಭೂಕಂಪದ ನಂತರ ವನವಾಟು ಸರ್ಕಾರದ ವೆಬ್‌ಸೈಟ್‌ಗಳು ಆಫ್‌ಲೈನ್‌ನಲ್ಲಿವೆ ಮತ್ತು ಪೋಲೀಸ್‌‍ ಮತ್ತು ಇತರ ಸಾರ್ವಜನಿಕ ಏಜೆನ್ಸಿಗಳ ಫೋನ್‌ ಸಂಖ್ಯೆಗಳು ಸಂಪರ್ಕಕಕ್ಕೆ ಸಿಗುತ್ತಿಲ್ಲ.

ದೇಶದ ಜಿಯೋಹಾಜಾರ್ಡ್‌್ಸ ಏಜೆನ್ಸಿ ಮತ್ತು ಪ್ರಧಾನ ಮಂತ್ರಿ ಕಚೇರಿಯ ಸಾಮಾಜಿಕ ಮಾಧ್ಯಮ ಚಾನಲ್‌ಗಳು ಕೂಡ ಬಂದ್‌ಆಗಿದೆ.ಆದರೆ ಕೆಲವು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಮಾಡಲಾದ ವೀಡಿಯೊವು ವನವಾಟುವಿನ ಕೆಲವು ರಾಜತಾಂತ್ರಿಕ ಕಟ್ಟಡವನ್ನು ತೋರಿಸುತ್ತದೆ ಅಲ್ಲಿನ ಬ್ರಿಟನ್‌, ಫ್ರಾನ್ಸ್ ಮತ್ತು ನ್ಯೂಜಿಲೆಂಡ್‌ ಸೇರಿದಂತೆ ಹಲವು ಟ್ಟಡಗಳು ಹಾನಿಯಾಗಿದೆ, ಸುಮಾರು ಮೂರೂವರೆ ಲಕ್ಷ ಜನರಿಗೆ ನೆಲೆಯಾಗಿರುವ 80 ದ್ವೀಪಗಳ ಸಮೂಹವಾದ ವನವಾಟುದಲ್ಲಿನ ಕೆಲವು ಕರಾವಳಿಗಳಿಗೆ ಸುನಾಮಿ ಅಲೆಗಳ ಬಗ್ಗೆ ಎಚ್ಚರಿಸಿದೆ. ಕಡಲ ಅಲೆಗಳ ಅಬ್ಬರ ಹೆಚ್ಚಾಗಲಿದೆ ಎಂದು ತಿಳಿಸಿದೆ.
ತಗ್ಗು ಪ್ರದೇಶದ ಕೆಲವು ದ್ವೀಪಗಳು ಸಮುದ್ರ ಮಟ್ಟದಿಂದ ಕೇವಲ 3 ಅಡಿ ಎತ್ತರದಲ್ಲಿದೆ. ಪಪುವಾ ನ್ಯೂಗಿನಿಯಾ, ಫಿಜಿ ಮತ್ತು ಸೊಲೊಮನ್‌ ದ್ವೀಪಗಳು ಸೇರಿದಂತೆ ಹಲವಾರು ಹತ್ತಿರದ ಪೆಸಿಫಿಕ್‌ ದ್ವೀಪ ರಾಷ್ಟ್ರಗಳಿಗೆ ಸುನಾಮಿ ಅಲೆಗಳ ಬಗ್ಗೆ ಎಚ್ಚರಿಸಲಾಗಿದೆ.

 

Leave a Reply

Your email address will not be published. Required fields are marked *

error: Content is protected !!