ಉದಯವಾಹಿನಿ, ನವದೆಹಲಿ: 94 ವರ್ಷದ ನಟಿ ಸುಲೋಚನಾ ವಯೋಸಹಜ ಅನಾರೋಗ್ಯದಿಂದ ಮುಂಬೈನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.ಸುಲೋಚನಾ ಅವರ ಮಗಳು ಕಾಂಚನ್ ಘನೇಕರ್ ಅವರು ಮಾಧ‍್ಯಮಗಳಿಗೆ ದೂರವಾಣಿ ಮೂಲಕ ಮಾಹಿತಿ ನೀಡುವಾಗ ಈ ಸುದ್ದಿಯನ್ನ ದೃಢಪಡಿಸಿದ್ದಾರೆ.
ನಾಳೆ ಅವರ ಪಾರ್ಥಿವ ಶರೀರವನ್ನು ಪ್ರಭಾದೇವಿಯಲ್ಲಿರುವ ಅವರ ಮನೆಯಲ್ಲಿ ಅಂತಿಮ ದರ್ಶನಕ್ಕಾಗಿ ಇರಿಸಲಾಗುವುದು ಮತ್ತು ನಂತರ ನಟನ ಅಂತಿಮ ವಿಧಿಗಳನ್ನು ಶಿವಾಜಿ ಪಾರ್ಕ್’ನಲ್ಲಿರುವ ಸ್ಮಶಾನದಲ್ಲಿ ನಡೆಸಲಾಗುವುದು.1960 ಮತ್ತು 70ರ ದಶಕದ ಜನಪ್ರಿಯ ಬಾಲಿವುಡ್ ಚಿತ್ರಗಳಲ್ಲಿ ತಾಯಿಯ ಪಾತ್ರಗಳನ್ನ ನಿರ್ವಹಿಸಲು ಹೆಸರುವಾಸಿಯಾದ ನಟಿ ಸುಲೋಚನಾ ಅವ್ರು ಮುಂಬೈನ ಸುಶ್ರುಷಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸುಲೋಚನಾ ಅವರ ಆರೋಗ್ಯವು ಶನಿವಾರ ತೀರಾ ಹದಗೆಟ್ಟಿದ್ದು, ಕಳೆದ ರಾತ್ರಿಯಿಂದ ವೆಂಟಿಲೇಟರ್ನಲ್ಲಿ ಇರಿಸಲಾಗಿತ್ತು. ಅದಕ್ಕೂ ಮೊದಲು, ಅವರಿಗೆ ನಿರಂತರ ಆಮ್ಲಜನಕ ಪೂರೈಕೆಯನ್ನು ನೀಡಲಾಗುತ್ತಿತ್ತು. ಸಧ್ಯ ಚಿಕಿತ್ಸೆ ಫಲಕಾರಿಯಾಗದೇ ಹಸುನೀಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!