ಉದಯವಾಹಿನಿ, ಮಾಸ್ಕೋ: ಯುದ್ಧವನ್ನು ಕೊನೆಗೊಳಿಸಲು ಡೊನಾಲ್ಡ್ ಟ್ರಂಪ್ ಅವರೊಂದಿಗೆ ಸಂಭಾವ್ಯ ಮಾತುಕತೆಗಳಲ್ಲಿ ಯೂಕ್ರೇನ್‌ನೊಂದಿಗೆ ರಾಜಿ ಮಾಡಿಕೊಳ್ಳಲು ಸಿದ್ಧ ಎಂದು ಅಧ್ಯಕ್ಷ ವ್ಯಾಡಿಮಿರ್ ಪುಟಿನ್ ಹೇಳಿದ್ದಾರೆ. ಅಲ್ಲದೆ ಇದರಲ್ಲಿ ಯೂಕ್ರೇನ್ ಅಧಿಕಾರಿಗಳೊಂದಿಗೆ ಮಾತುಕತೆ ಆರಂಭಿಸಲು ಯಾವುದೇ ಷರತ್ತುಗಳಿಲ್ಲ ಎಂದು ಪುಟಿನ್ ಹೇಳಿರುವುದು ಗಮನಿಸಬೇಕಾದ ಬಹುಮುಖ್ಯ ಅಂಶವಾಗಿದೆ. ರಷ್ಯಾ-ಯೂಕ್ರೇನ್ ಯುದ್ಧವನ್ನು ತ್ವರಿತವಾಗಿ ಕೊನೆಗೊಳಿಸುವುದಾಗಿ ಟ್ರಂಪ್ ಪ್ರತಿಜ್ಞೆ ಮಾಡಿದ್ದಾರೆ.
ಆದರೆ ಅವರು ಸಂಘರ್ಷವನ್ನು ಹೇಗೆ ಕೊನೆಗೊಳಿಸುತ್ತಾರೆ ಎಂಬುದನ್ನು ಇನ್ನೂ ವಿವರಿಸಿಲ್ಲ ಪುಟಿನ್ ಅವರ ಈ ಹೇಳಿಕೆಯು ಯೂಕ್ರೇನ್ ಯುದ್ಧದ ಸುಮಾರು 34 ತಿಂಗಳ ನಂತರ ಅವರ ವಾರ್ಷಿಕ ಪ್ರಶೋತ್ತರ ಕಾರ್ಯಕ್ರಮದ ಸಮಯದಲ್ಲಿ ಬಂದಿದೆ. ಕಾರ್ಯಕ್ರಮದಲ್ಲಿ ಅವರು ರಾಜ್ಯ ದೂರದರ್ಶನದಲ್ಲಿ ಮಾಧ್ಯಮಗಳು ಮತ್ತು ಸಾಮಾನ್ಯ ಜನರ ಪ್ರಶ್ನೆಗಳಿಗೆ ಉತ್ತರಿಸುತ್ತಿದರು. ರಷ್ಯಾ ಪ್ರಸ್ತುತ ದುರ್ಬಲ ಸ್ಥಿತಿಯಲ್ಲಿದೆ ಎಂಬ ಪ್ರಶ್ನೆಯನ್ನು ಪುಟಿನ್ ನಿರಾಕರಿಸಿದರು. ಅಮೆರಿಕದ ಸುದ್ದಿ ವಾಹಿನಿಯ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಪುಟಿನ್, ಟ್ರಂಪ್ ಅವರೊಂದಿಗೆ ವರ್ಷಗಳ ಕಾಲ ಮಾತನಾಡಿಲ್ಲ ಎಂಬುದನ್ನು ಸೂಚಿಸಿದ ಅವರು, ಪ್ರಸ್ತುತ ಟ್ರಂಪ್ ಅವರನ್ನು ಭೇಟಿ ಮಾಡಲು ಸಿದ್ದ ಎಂದು ಹೇಳಿದ್ದಾರೆ.
