ಉದಯವಾಹಿನಿ, ಚನ್ನಪಟ್ಟಣ: ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಗೊ.ರು.ಚನ್ನಬಸಪ್ಪ ಅವರು ಮಂಡ್ಯಕ್ಕೆ ತೆರಳಿರುವ ಮಾರ್ಗ ಮಧ್ಯೆ ಚನ್ನಪಟ್ಟಣದಲ್ಲಿ ಗುರುವಾರ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಸೌಟ್ ಅಂಡ್ ಗೈಡ್ ಸಂಸ್ಥೆ ವತಿಯಿಂದ ಆತ್ಮೀಯ ಸ್ವಾಗತ ನೀಡಿ, ನಂತರ ಮಂಡ್ಯ ಕಡೆಗೆ ಬೀಳ್ಕೊಡಲಾಯಿತು. ನಗರದ ಗಾಂಧಿ ಭವನದ ಬಳಿ ಅವರಿಗೆ ಜೈಕಾರ ಹಾಕಿ ಸ್ವಾಗತಿಸಿ, ನಂತರ ಸನ್ಮಾನಿಸಲಾಯಿತು.
ಹಿರಿಯ ಪತ್ರಕರ್ತ ಸು.ತ.ರಾಮೇಗೌಡ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಟಿ.ನಾಗೇಶ್, ನಿವೃತ್ತ ಶಿಕ್ಷಕ ಗುರುಮಾದಯ್ಯ ಮುಖಂಡ ರಾಮಕೃಷ್ಣ. ಸೌಟ್ ಅಂಡ್ ಗೈಡ್ ಸಂಸ್ಥೆಯ ನಾಗೇಂದ್ರ, ಈರಾನಾಯಕ್, ಸಂಸ್ಥೆಯ ವಿದ್ಯಾರ್ಥಿಗಳು ಹಾಜರಿದ್ದರು.
