ಉದಯವಾಹಿನಿ , ಬೆಂಗಳೂರು: ವಿಧಾನಪರಿಷತ್‌ ಸದಸ್ಯ ಸಿ.ಟಿ.ರವಿ ಪ್ರಕರಣದಿಂದ ಎಚ್ಚೆತ್ತುಕೊಂಡಿರುವ ಬಿಜೆಪಿ ಮುಂದಿನ ದಿನಗಳಲ್ಲಿ ರಾಜ್ಯಸರ್ಕಾರದ ವಿರುದ್ಧ ಒಗ್ಗಟ್ಟಿನಿಂದ ಹೋರಾಟಕ್ಕೆ ಧುಮಕಲಿದೆ.
ಬೆಳಗಾವಿಯ ಸುವರ್ಣಸೌಧದಲ್ಲಿ ನಡೆದ ಘಟನೆ ನಂತರ ರಾಜ್ಯಸರ್ಕಾರದ ನಡೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಇದನ್ನು ಪಕ್ಷದ ಸಂಘಟನೆಗೆ ಬಳಸಿಕೊಳ್ಳಬೇಕೆಂದು ಕೇಂದ್ರ ವರಿಷ್ಠರು ಸೂಚನೆ ಕೊಟ್ಟಿದ್ದಾರೆ.
ಸರ್ಕಾರ ಈ ಪ್ರಕರಣವನ್ನು ಸರಿಯಾಗಿ ನಿರ್ವಹಣೆ ಮಾಡದಿರುವುದು ಸಾರ್ವಜನಿಕ ವಲಯದಲ್ಲೂ ಟೀಕೆಗೆ ಗ್ರಾಸವಾಗಿದೆ. ಕಾರಣ ಸಚಿವೆ ಲಕ್ಷ್ಮೀಹೆಬ್ಬಾಳ್ಕರ್‌ ಅವರಿಗೆ ರವಿ ಅಶ್ಲೀಲ ಪದಬಳಕೆ ಮಾಡಿದ್ದು ಎಷ್ಟು ಸಮಂಜಸವಲ್ಲವೋ ಅದೇ ರೀತಿ ರವಿಯವರನ್ನು ನಡೆಸಿಕೊಂಡಿದ್ದಕ್ಕೆ ಟೀಕೆಗಳು ವ್ಯಕ್ತವಾಗಿವೆ.
ಪಕ್ಷದೊಳಗೆ ಏನೇ ಭಿನ್ನಾಭಿಪ್ರಾಯ, ಅಪಸ್ವರ ಇದ್ದರೂ ಎಲ್ಲದನ್ನೂ ಬದಿಗೊತ್ತಿ ಬರುವ ದಿನಗಳಲ್ಲಿ ಪಕ್ಷದ ಸಂಘಟನೆಗಳು ಒತ್ತು ನೀಡುವಂತೆ ರಾಜ್ಯಘಟಕಕ್ಕೆ ಕಿವಿಮಾತು ಹೇಳಿದ್ದಾರೆ.
ಇದರ ಸುಳಿವು ಅರಿತೇ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ರವಿ ಬಂಧನದ ನಂತರ ಪಕ್ಷದೊಳಗಿನ ಅಸಮಾಧಾನವನ್ನು ಬದಿಗೊತ್ತಿ ಹಿರಿಯರು ಮತ್ತು ಕಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಮುನ್ನಡೆದಿದ್ದಾರೆ.

ಮುಂದಿನ ದಿನಗಳಲ್ಲಿ ಸರ್ಕಾರ ರವಿಯವರನ್ನು ನಡೆಸಿಕೊಂಡ ರೀತಿ ದೂರು ನೀಡಿದ್ದರೂ ಸಚಿವೆಯ ವಿರುದ್ಧ ದಾಖಲಾಗದ ದೂರು ಗೃಹಸಚಿವರನ್ನು ಕತ್ತಲಲ್ಲಿಟ್ಟು ಪ್ರಭಾವಿ ಸಚಿವರೊಬ್ಬರ ನಿದರ್ಶನದ ಮೇರೆಗೆ ಈ ಘಟನೆ ನಡೆದಿದೆ ಎಂದು ಬಿಂಬಿಸಲು ಬಿಜೆಪಿ ಮುಂದಾಗಿದೆ.

 

Leave a Reply

Your email address will not be published. Required fields are marked *

error: Content is protected !!