ಉದಯವಾಹಿನಿ, ಲಂಡನ್ : ಚೆಸ್ ಟೂರ್ನಿಯಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಮೊಮಗ ದೇವಾಂಶ ನಾರಾ 175 ಪಜಲ್ ಗಳನ್ನು ಅತಿ ವೇಗವಾಗಿ ಬಗೆಹರಿಸುವ ಮೂಲಕ ವರ್ಲ್ಡ್ ಬುಕ್ ರೆಕಾರ್ಡ್ಸ್ ನಲ್ಲಿ ತನ್ನ ಹೆಸರನ್ನು ದಾಖಲಿಸಿದ್ದಾನೆ. ಚೆಕ್ ಮ್ಯಾಟ್ ಮ್ಯಾರಥಾನ್ ನಲ್ಲಿ ಪಾಲ್ಗೊಂಡಿದ್ದ ದೇವಾಂಶ್ ತನ್ನ ಅಪ್ರತಿಮ ಜ್ಞಾನ ಪ್ರದರ್ಶಿಸಿರುವುದಕ್ಕೆ ತಂದೆ ಲೋಕೇಶ್ ಹಾಗೂ ತಾಯಿ ಬ್ರಹಿಣಿ ಅವರು ದೇವಾಂಶ್ ನ ತರಬೇತುದಾರ ಕೆ. ರಾಜಶೇಖರ್ ರೆಡ್ಡಿ ಅವರನ್ನು ಅಭಿನಂದಿಸಿದ್ದಾರೆ.
ಮಗನ ಸಾಧನೆಗೆ ಶ್ಲಾಘನೆ: ` ಚೆಸ್ ನಲ್ಲಿ ಇತ್ತೀಚೆಗೆ ಭಾರತದ ಆಟಗಾರರು ಅಪ್ರತಿಮ ಸಾಧನೆ ತೋರುತ್ತಿದ್ದು, ಇದರಿಂದ ಸ್ಫೂರ್ತಿ ಪಡೆದಿರುವ ದೇವಾಂಶ್ ಕೂಡ, ಚೆಸ್ ಆಟದ ಕಡೆಗೆ ಹೆಚ್ಚಿನ ಒಲವು ಮೂಡಿಸಿಕೊಂಡಿದ್ದಾನೆ. ರಾಯ್ ಚೆಸ್ ಅಕಾಡೆಮಿಯು ಆತನಲ್ಲಿ ಅಡಗಿರುವ ಪ್ರತಿಭೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ಕೆಲಸ ಮಾಡುತ್ತಿದ್ದು, ಅಕಾಡೆಮಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ’ ಎಂದು ದೇವಾಂಶ್ ತಂದೆ ಲೋಕೇಶ್ ನಾರಾ ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!