ಉದಯವಾಹಿನಿ, ಕೋಲ್ಕತ್ತಾ : ತನ್ನ ಕಾದಂಬರಿಯಿಂದ ರೂಪಾಂತರಗೊಂಡ ಲಜ್ಜಾ (ನಾಚಿಕೆ) ನಾಟಕವನ್ನು ಎರಡು ಚಿತ್ರಮಂದಿರಗಳಲ್ಲಿ ಬಲವಂತವಾಗಿ ರದ್ದುಗೊಳಿಸುವ ಮೂಲಕ ಪಶ್ಚಿಮ ಬಂಗಾಳ ಸರ್ಕಾರ ಕಲಾವಿದರು ಮತ್ತು ಬರಹಗಾರರ ಧ್ವನಿಯನ್ನು ಹತ್ತಿಕ್ಕುತ್ತಿದೆ ಎಂದು ಬಾಂಗ್ಲಾದೇಶದಿಂದ ಗಡಿಪಾರಾಗಿರುವ ಲೇಖಕಿ ತಸ್ಲೀಮಾ ನಸ್ರಿನ್‌ ಆರೋಪಿಸಿದ್ದಾರೆ.
ಉತ್ತರ 24 ಪರಗಣದ ಗೋಬರ್ದಂಗ ನಾಟ್ಯೌತ್ಸವ್‌ ಮತ್ತು ಹೂಗ್ಲಿಯ ಪಾಂಡುವಾ ನಾಟ್ಯೋತ್ಸವದಲ್ಲಿ ಪ್ರದರ್ಶಿಸಲಾಗುತ್ತಿದ್ದ ಲಜ್ಜಾ ನಾಟಕವನ್ನು ಪೊಲೀಸರು ಕೋಮು ಗಲಭೆಗಳನ್ನು ಪ್ರಚೋದಿಸಬಹುದು ಎಂಬ ಕಳವಳದಿಂದ ರದ್ದು ಪಡಿಸಲು ಒತ್ತಾಯಿಸಿದ್ಧಾರೆ ಎಂದು ನಸ್ರಿನ್‌ ಆರೋಪಿಸಿದ್ದಾರೆ.
ಎರಡು ತಿಂಗಳ ಹಿಂದೆ ನಾಟಕದ ವೇಳಾಪಟ್ಟಿಯನ್ನು ಪ್ರಕಟಿಸಿದಾಗ, ಇದ್ದಕ್ಕಿದ್ದಂತೆ ಪೊಲೀಸರು ಲಜ್ಜ ನಾಟಕವನ್ನು ಪಟ್ಟಿಯಿಂದ ಕೈಬಿಡುವಂತೆ ಸಂಘಟಕರ ಮೇಲೆ ಒತ್ತಡ ತಂದಿದ್ದಾರೆ. ನಾನು ನಿಮಗೆ ನೆನಪಿಸುತ್ತೇನೆ, ದೆಹಲಿಯಲ್ಲಿ ನಾಟಕ ತಂಡವು ಮೂರು ಬಾರಿ ಅದೇ ನಾಟಕವನ್ನು ಪ್ರದರ್ಶಿಸಿತು. ತುಂಬಿದ ಸಭಾಂಗಣದ ಮುಂದೆ ಎಂದು ಅವರು ಎಕ್‌್ಸ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ನಾಟಕವು ಹಿಂಸಾಚಾರಕ್ಕೆ ಕಾರಣವಾಗಬಹುದು ಎಂಬ ಕಾರಣಕ್ಕಾಗಿ ತಡೆ ಹಿಡಿದಿರುವುದನ್ನು ಪಶ್ಚಿಮ ಬಂಗಾಳದ ಆಡಳಿತವನ್ನು ನಸ್ರಿನ್‌ ಟೀಕಿಸಿದರು.ನನ್ನ ಉಪಸ್ಥಿತಿಯು ಮೂಲಭೂತವಾದಿಗಳ ಗಲಭೆಗಳಿಗೆ ಪ್ರಚೋದಿಸುತ್ತದೆ ಎಂಬ ಆತಂಕದಿಂದ ನಾನು ಪಶ್ಚಿಮ ಬಂಗಾಳವನ್ನು ತೊರೆಯಬೇಕಾಯಿತು. ಗಲಭೆಕೋರರ ವಿರುದ್ಧ ಏಕೆ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಮತ್ತು ಬರಹಗಾರರ ಮುಕ್ತ ಅಭಿವ್ಯಕ್ತಿಯ ಧ್ವನಿಯನ್ನು ಏಕೆ ನಾಶಪಡಿಸಲಾಗುತ್ತಿದೆ ಎಂದು ನನಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಅವರು ವಿಷಾದಿಸಿದರು.

Leave a Reply

Your email address will not be published. Required fields are marked *

error: Content is protected !!