ಉದಯವಾಹಿನಿ, ಕ್ಯಾಲಿಫೋರ್ನಿಯಾ: ರಾಜಸ್ಥಾನದಲ್ಲಿ ಹಲವು ಪ್ರಕರಣಗಳಲ್ಲಿ ಬೇಕಾಗಿದ್ದ ಡ್ರಗ್ಸ್ ಸ್ಮಗ್ಲರ್‌ ಸುನೀಲ್‌ ಯಾದವ್‌ ಅಮೆರಿಕದ ಕ್ಯಾಲಿಫೋರ್ನಿಯಾದ ಸ್ಟಾಕ್‌ಟನ್‌ ನಗರದಲ್ಲಿ ನಡೆದ ಶೂಟೌಟ್‌ನಲ್ಲಿ ಹತರಾಗಿದ್ದಾರೆ.
ಸುನಿಲ್‌ ಯಾದವ್‌ ಒಬ್ಬ ಕುಖ್ಯಾತ ಕಳ್ಳಸಾಗಣೆದಾರನಾಗಿದ್ದು, ಪಾಕಿಸ್ತಾನದ ಮಾರ್ಗದ ಮೂಲಕ ಭಾರತಕ್ಕೆ ಡ್ರಗ್ಸ್ ತಲುಪಿಸುತ್ತಿದ್ದ. ಕೆಲವು ವರ್ಷಗಳ ಹಿಂದೆ, 300 ಕೋಟಿ ರೂಪಾಯಿ ಮೌಲ್ಯದ ಮಾದಕವಸ್ತು ರವಾನೆಗೆ ಸಂಬಂಧಿಸಿದಂತೆ ಅವರ ಹೆಸರು ಹೊರಹೊಮಿತ್ತು.
ಲಾರೆನ್ಸ್ ಬಿಷ್ಣೋಯ್‌ ಗ್ಯಾಂಗ್‌ನ ಭಾಗವಾಗಿದ್ದ ದರೋಡೆಕೋರ ರೋಹಿತ್‌ ಗೋಡಾರಾ ಸುನೀಲ್‌ ಯಾದವ್‌ ಹತ್ಯೆಯ ಹೊಣೆಯನ್ನು ಹೊತ್ತುಕೊಂಡಿದ್ದಾನೆ. ನಮ ಸಹೋದರ ಅಂಕಿತ್‌ ಭಾಡು ಅವರನ್ನು ಎನ್‌ಕೌಂಟರ್‌ನಲ್ಲಿ ಕೊಲ್ಲಲು ಪಂಜಾಬ್‌ ಪೊಲೀಸರೊಂದಿಗೆ ಕೆಲಸ ಮಾಡಿದ್ದ ಹೀಗಾಗಿ ನಾವು ಅವನ ಪ್ರತೀಕಾರ ತೀರಿಸಿಕೊಂಡಿದ್ದೇವೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅಂಕಿತ್‌ ಭಾದು ಅವರ ಎನ್‌ಕೌಂಟರ್‌ ಸಾವಿನಲ್ಲಿ ಯಾದವ್‌ ಭಾಗಿಯಾಗಿದ್ದಾರೆ ಎಂಬ ಸುದ್ದಿ ಬಂದಾಗ ಯಾದವ್‌ ದೇಶದಿಂದ ಓಡಿಹೋಗಿದ್ದ ಎಂದು ಗೋದಾರಾ ಹೇಳಿದರು. ಭದ್ರತಾ ಸಂಸ್ಥೆಯ ಮೂಲಗಳ ಪ್ರಕಾರ, ಸುನಿಲ್‌ ಯಾದವ್‌ ಎರಡು ವರ್ಷಗಳ ಹಿಂದೆ ರಾಹುಲ್‌ ಎಂಬ ಹೆಸರಿನಲ್ಲಿ ನಕಲಿ ಪಾಸ್‌‍ಪೋರ್ಟ್‌ ಬಳಸಿ ಅಮೆರಿಕಕ್ಕೆ ಪಲಾಯನ ಮಾಡಿದ್ದರು.

ಮೂಲತಃ ಪಂಜಾಬ್‌ನ ಫಾಜಿಲ್ಕಾ ಜಿಲ್ಲೆಯ ಅಬೋಹರ್‌ನವರಾದ ಸುನೀಲ್‌ ಯಾದವ್‌ ಒಂದು ಕಾಲದಲ್ಲಿ ಲಾರೆನ್‌್ಸ ಬಿಷ್ಣೋಯ್‌ ಮತ್ತು ರೋಹಿತ್‌ ಗೋದಾರಾ ಅವರಿಗೆ ನಿಕಟರಾಗಿದ್ದರು. ಆದರೆ ಅಂಕಿತ್‌ ಭಾದು ಅವರ ಹತ್ಯೆಯು ಅವರನ್ನು ಅವನ ವಿರುದ್ಧ ತಿರುಗಿಸಿತು ಎಂದು ಮೂಲಗಳು ತಿಳಿಸಿವೆ.

 

Leave a Reply

Your email address will not be published. Required fields are marked *

error: Content is protected !!