ಉದಯವಾಹಿನಿ, ದಾವಣಗೆರೆ: ಮಹಾರಾಷ್ಟçದ ನೂತನ ಮುಖ್ಯಮಂತ್ರಿಗಳಾದ ದೇವೇಂದ್ರ ಫಡ್ನವಿಸ್ ಅವರನ್ನು ಮಾಜಿ ಕೇಂದ್ರ ಸಚಿವರು ಹಾಗೂ ಮಾಜಿ ಸಂಸದರಾದ ಡಾ. ಜಿ.ಎಂ. ಸಿದ್ದೇಶ್ವರರವರು ಭೇಟಿ ಮಾಡಿ ಶುಭಾಷಯಗಳನ್ನು ತಿಳಿಸಿದರು.ಈ ಸಂಧರ್ಭದಲ್ಲಿ ಮಾಜಿ ಸಚಿವರು ಮತ್ತು ಮಾಜಿ ಶಾಸಕರಾದ ಮುರುಗೇಶ್. ಆರ್. ನಿರಾಣಿ, ದೌಂಡ್ (ಪುಣೆ)ಯ ಶಾಸಕರಾದ ರಾಹುಲ್ ಸುಭಾಷ್ ಕೂಲ್, ಬಿ.ಜೆ.ಪಿ. ಯುವ ಮುಖಂಡರು ಹಾಗೂ ಯುವ ಉದ್ಯಮಿಗಳಾದ ಅನಿತ್‌ಕುಮಾರ್. ಜಿ.ಎಸ್., ಹಾಗೂ ಮುಖಂಡರಾದ ವೈಭವ್ ಕಾಶಿಕರ್ ಉಪಸ್ಥಿತರಿದ್ದರು.
