ಉದಯವಾಹಿನಿ, ಕೋಲಾರ: ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕಾರ್ಯಚಟುವಟಿಕೆಗಳಿಗೆ ಲೋಪವಾಗದಂತೆ ಕಾಲಕಾಲಕ್ಕೆ ಆಯಾ ದಿನದ ಮಹತ್ವ ಮತ್ತು ಸಮಯಪ್ರಜ್ಞೆ ಮೂಡಿಸುವಲ್ಲಿ ವಿವಿ ಬಿಡುಗಡೆ ಮಾಡಿರುವ ೨೦೨೫ನೇ ಸಾಲಿನ ಕ್ಯಾಲೆಂಡರ್ ಹಾಗೂ ದಿನಚರಿ ಸಹಕಾರಿಯಾಗಲಿ,ಹೊಸ ವರ್ಷ ಎಲ್ಲರಿಗೂ ಹರ್ಷ ತರಲಿ ಎಂದು ವಿವಿಯ ಕುಲಪತಿ ಪ್ರೊ.ನಿರಂಜನ ವಾನಳ್ಳಿ ಹಾರೈಸಿದರು.
ಬೆಂಗಳೂರು ಉತ್ತರ ವಿವಿಯ ನಗರ ಹೊರವಲಯದ ಟಮಕದ ಆಡಳಿತ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೊಸ ವರ್ಷದ ವಿವಿಯ ಕ್ಯಾಲೆಂಡರ್ ಹಾಗೂ ಡೈರಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
ಬೆಂಗಳೂರು ಉತ್ತರ ವಿವಿ ತನ್ನ ಕಾರ್ಯಚಟುವಟಿಕೆಗಳಲ್ಲಿ ಪಾರದರ್ಶಕತೆ ಕಾಪಾಡಿಕೊಂಡು ಕಾರ್ಯನಿರ್ವಹಿಸುವ ಮೂಲಕ ಶೈಕ್ಷಣಿಕ ಚಟುವಟಿಕೆಗಳಿಗೆ ಯಾವುದೇ ಲೋಪವಿಲ್ಲದಂತೆ ತನ್ನ ಕೆಲಸ ಮಾಡಿಕೊಂಡು ಬಂದಿದೆ, ಇದಕ್ಕೆ ಎಲ್ಲಾ ಸಿಂಡಿಕೇಟ್ ಸದಸ್ಯರು, ಸಿಬ್ಬಂದಿ ಸಹಕಾರ ನೀಡುತ್ತಿದ್ದಾರೆ ಎಂದರು.
ಹೊಸ ವರ್ಷದಲ್ಲಿ ವಿವಿಯಿಂದ ಮತ್ತಷ್ಟು ಹೊಸ ಹೊಸ ಆಲೋಚನೆಗಳು, ಕಾರ್ಯಕ್ರಮಗಳನ್ನು ಮೂಡಿ ಬರುವಂತೆ ಮಾಡಲು ಎಲ್ಲರ ಸಹಕಾರ ಕೋರಿದ ಅವರು, ನೂತನ ವರ್ಷ ಎಲ್ಲರಿಗೂ ಶುಭ ತರಲಿ, ವಿವಿಯ ಕ್ಯಾಂಪಾಸ್ ಶೀಘ್ರ ಲೋಕಾರ್ಪಣೆಯಾಗಲಿ ಎಂದು ಆಶಿಸಿದರು.

Leave a Reply

Your email address will not be published. Required fields are marked *

error: Content is protected !!