ಉದಯವಾಹಿನಿ, ಬಳ್ಳಾರಿ: ನೆರಯ ಆಂದ್ರ ಪ್ರದೇಶದವರು ಕಟ್ಟಿಹಾಕಿದ್ದ ತಾಲೂಕಿನ ಬೊಮ್ಮನಹಾಳ್ ಗ್ರಾಮದ ಸುಂಕ್ಲಮ್ಮ ದೇವಿಗೆ ಹರಕೆ ಬಿಟ್ಟಿದ್ದ ಕೋಣ ೨೦ ದಿನಗಳ ನಂತರ ರಾತ್ರೋ ರಾತ್ರಿ ತನ್ನೂರಿಗೆ ಬಂದು ಸೇರಿದೆ. ಮುಂದಿನ ತಿಂಗಳು ಜ.೨೧ ಹಾಗು ೨೨ ರಂದು ನಡೆಯುವ ಐದು ವರ್ಷಗಳಿಗೆ ಒಮ್ಮೆ ನಡೆಯುವ ಸುಂಕ್ಲಮ್ಮ ಜಾತ್ರೆಗೆ ಕೋಣ ಮರಳಿ ಬಂದ ಹಿನ್ನಲೆಯಲ್ಲಿ ಸಿದ್ಧತೆಗಳು ಭರ್ಜರಿ ನಡೆದಿವೆ.
ಬೊಮ್ಮಹಾಳ್ ಗ್ರಾಮದಲ್ಲಿ ಪ್ರತಿ ೫ ವರ್ಷಕ್ಕೆ ಒಮ್ಮೆ ಸುಂಕಲ್ಮ್ಮ ದೇವರನ್ನು ಮಾಡಲಾಗುತ್ತದೆ. ಕಳೆದ ಐದು ವರ್ಷದ ಹಿಂದೆ ದೇವರು ಮಾಡಿದಾಗ ಕೋಣದ ಕರುವನ್ನು ಹರಕೆ ಬಿಡಲಾಗಿತ್ತು ಅದು ದೊಡ್ಡದಾಗಿ ಬೆಳೆದಿತ್ತು. ದೇವರ ಕೋಣವನ್ನು ಕಟ್ಟುವುದಿಲ್ಲ ಅದು ಗ್ರಾಮದ ಮತ್ತು ಸುತ್ತಮುತ್ತಲ ಗ್ರಾಮಗಳಿಗೆ ಸಂಚರಿಸಿ ಸ್ವೇಚ್ಛಾಚಾರವಾಗಿ ಮೇಯುತ್ತದೆ.ಹೀಗೆ ಮೇಯುತ್ತ ನೆರೆಯ ಆಂದ್ರ ಪ್ರದೇಶಕ್ಕೆ ಬೊಮ್ಮಹಾಳು ಗ್ರಾಮದಿಂದ ಕೇವಲ ಎರಡು ಕಿಲೋ ಮೀಟರ್ ದೂರದ ಮೆದ್ಯಾಳು ಗ್ರಾಮಕ್ಕೆ ತೆರಳಿದೆ.ಕಳೆದ ೨೫ ವರ್ಷಗಳಿಂದಲೂ ದೇವರು ಮಾಡದ ಆ ಗ್ರಾಮದ ಜನ ಈ ವರ್ಷ ಜ ೨೧ ರಂದು ದೇವರು ಮಾಡಲು ನಿರ್ಧರಿಸಿದ್ದು. ತಮ್ಮೂರಿಗೆ ಮೇಯಲು ಬಂದ ಬೊಮ್ಮನಾಳಿನ ಈ ಕೋಣವನ್ನು ೨೦ ದಿನಗಳ ಕಾಲ ಕಟ್ಟಿಹಾಕಿಕೊಂಡಿದ್ದರು.
ಬೊಮ್ಮನಾಳಿನ ಜನತೆ ಇದು ನಮ್ಮೂರ ಕೋಣ ಬಿಡಿ ಎಂದು ಕೇಳು ಹೋದಾಗ ಮಾತಿನ ಚಕಮಕಿ ನಡೆದು ಅವರ ಮೇಲೆ ಹಲ್ಲೆ ಮಾಡಿದ್ದರು ಮೆದ್ಯಾಳಿನ ಜನ. ಮೆದ್ಯಾಳಿನಲ್ಲಿದ್ದ ಕೋಣ ಸರಿಯಾಗಿ ಹುಲ್ಲು ಮೇಯದೆ ಸೊರಗಿತ್ತು. ಹರಕೆಗೆ ಬಿಟ್ಟ ಕೋಣ ಇಲ್ಲದಿದ್ದರೆ ಗ್ರಾಮಕ್ಕೆ ಕೆಡುಕಾಗುತ್ತದೆಂದು ಕುಪಿತಗೊಂಡ ಬೊಮ್ಮನಾಳಿನ ಜನ ಕಳೆದ ಶುಕ್ರವಾರ ರಾತ್ರಿ ೧೨.೧೫ ಕ್ಕೆ ಮೆದ್ಯಾಳು ಗ್ರಾಮದ ಹರಿಜನ ಓಣಿಯಲ್ಲಿದ್ದ ಕೋಣವನ್ನು ಕಣ್ಣಿ ಬಿಚ್ಚಿದ್ದ ತಕ್ಷಣ ಅದು ಒಂದೇ ತಾಸಿನಲ್ಲಿ ಬೊಮ್ಮನಾಳಿಗೆ ಓಡಿ ಬಂದಿದೆಯಂತೆ.
