ಉದಯವಾಹಿನಿ, ಅಥಣಿ : ವಿಶ್ವಚೇತನ ಪ್ರಕಾಶನ ಹಾಗೂ ಸಾಹಿತ್ಯ ಸಾಂಸ್ಕøತಿಕ ಸಂಘ, ಅಥಣಿ ಇವರ ಸಹಯೋಗದಲ್ಲಿ ಸಾಹಿತಿ ಎಸ್.ಕೆ. ಹೊಳೆಪ್ಪನವರ ಸಂಪಾದಿತ “ಕಾವ್ಯ ಗಂಗೆ ” ಕವನ ಸಂಕಲನ ಲೋಕಾರ್ಪಣೆ ಹಾಗೂ ಕವಿಗೋಷ್ಠಿ ಕಾರ್ಯಕ್ರಮ ರವಿವಾರ ದಿ 29 ರಂದು ಮುಂಜಾನೆ 10 ಗಂಟೆಗೆ ಸ್ಥಳೀಯ ಕೆ. ಎ. ಲೋಕಾಪೂರ ಪದವಿ ಮಹಾವಿದ್ಯಾಲಯದಲ್ಲಿ ಜರುಗಲಿದೆ.ಈ ಕಾರ್ಯಕ್ರಮದ ಉದ್ಘಾಟಕರಾಗಿ ಹಿರಿಯ ಸಾಹಿತಿ, 2024 ರ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಬಾಳಾಸಾಹೇಬ ಲೋಕಾಪೂರ ಆಗಮಿಸಲಿದ್ದಾರೆ. ಅಧ್ಯಕ್ಷತೆಯನ್ನು ಲೋಕಾಪುರ ಮಹಾವಿದ್ಯಾಲಯ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಅರವಿಂದರಾವ ಬಿ. ದೇಶಪಾಂಡೆ ವಹಿಸಲಿದ್ದು, ಸಿದ್ಧರಾಜ ಪೂಜಾರಿ ಹಿರಿಯ ಸಾಹಿತಿ ಹೆಸರಾಂತ ವಿಮರ್ಶಕ ಕೃತಿ ಬಿಡುಗಡೆ ಮಾಡಲಿದ್ದಾರೆ. ಡಾ.ರಾಮಕೃಷ್ಣ ಮರಾಠೆ ಹಿರಿಯ ರಂಗ ಚಿಂತಕ ಕೃತಿ ಪರಿಚಯ ಮಾಡಲಿದ್ದಾರೆ.
ಮುಖ್ಯಅತಿಥಿಗಳಾಗಿ ಡಾ. ಪಿ. ಜಿ. ಕೆಂಪಣ್ಣವರ ಹಿರಿಯ ಸಾಹಿತಿ, ರವಿ ಕೋಟಾರಗಸ್ತಿ ನಿವೃತ್ತ ವಿಶೇಷ ಜಿಲ್ಲಾಧಿಕಾರಿ ಭಾಗವಹಿಸಲಿದ್ದು, ಅತಿಥಿಗಳಾಗಿ ನಾರಾಯಣ ಅನೀಖಿಂಡಿ ಆಗಮಿಸಲಿದ್ದಾರೆ. ಕವಿಗೋಷ್ಠಿ ಅಧ್ಯಕ್ಷತೆಯನ್ನು ಸಿದ್ಧರಾಜ ಪೂಜಾರಿ ಹಿರಿಯ ಸಾಹಿತಿ ವಹಿಸಲಿದ್ದು, ವಿನೂತನ ವಿಚಾರ ವೇದಿಕೆ ಅಥಣಿಯ ಅಧ್ಯಕ್ಷ ಅಪ್ಪಾಸಾಹೇಬ ಅಲಿಬಾದಿ ಆಶಯ ನುಡಿಯನ್ನು ಆಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬಿ. ಜೆ. ಪಾರ್ವತಿ ಸೋನಾರೆ ಅಧ್ಯಕ್ಷರು, ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತು, ಬೀದರ, ಶರಣಪ್ಪ ಎಸ್. ಕೋಟಾರಗಸ್ತಿ ಶಿಕ್ಷಕರು, ಕಲಬುರಗಿ, ದೇವೇಂದ್ರ ಬಿಸ್ವಾಗರ ಸಾಹಿತಿ ಪಾಲ್ಗೊಳ್ಳಲಿದ್ದಾರೆ.
