ಉದಯವಾಹಿನಿ, ಹೊಸಪೇಟೆ : ನಗರದ ನೆಹರೂ ಕಾಲೋನಿಯ ಶ್ರೀಅಯಪ್ಪ ಸ್ವಾಮಿ ದೇವಾಲಯದಲ್ಲಿ ಗುರುವಾರ ಮಂಡಲ ಪೂಜಾ ವಿಶೇಷ ಕಾರ್ಯಕ್ರಮ ಅತ್ಯಂತ ಶ್ರದ್ಧಾ-ಭಕ್ತಿ ಸಂಭ್ರಮದಿಂದ ನೆರವೇರಿದವು.
ಮಂಡಲ ಪೂಜಾ ವಿಶೇಷ ಕಾರ್ಯಕ್ರಮದ ಪ್ರಯುಕ್ತ ದೇಗುಲದ ಶ್ರೀ ಅಯ್ಯಪ್ಪ ಸ್ವಾಮಿ ಮೂರ್ತಿಗೆ ಕಳಾಶಾಭಿಷೇಕ ಅಷ್ಟಾಭಿಷೇಕ, ವಿಶೇಷ ಅಲಂಕಾರ ಗೈದು ಪೂಜೆಯನ್ನು ನೆರವೇರಿಸಲಾಯಿತು.
ಪ್ರಧಾನ ಆರ್ಚಕ ಶಂಕರನ್ ಎನ್.ನಂಬೂದರಿ ಅವರು ವಿಶೇಷ ಪೂಜೆವನ್ನು ನೆರವೇರಿಸಿದರು.
ಅಯ್ಯಪ್ಪ ಮಾಲಾಧಾರಿಗಳು ಸೇರಿದಂತೆ ಸಹಸ್ರಾರು ಭಕ್ತರು, ಬೆಳಿಗ್ಗೆಯಿಂದ ಅಯ್ಯಪ್ಪ ದೇವಸ್ಥಾನಕ್ಕೆ ಆಗಮಿಸಿ, ದೇವರ ದರ್ಶನ ಪಡೆದರು. ಹೂ-ಹಣ್ಣು, ಕಾಣಿಕೆ ಸಲ್ಲಿಸಿ ಭಕ್ತಿ ಮೆರೆದರು. ಬಳಿಕ ನಡೆದ ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ಸಹಸ್ರಾರು ಭಕ್ತರು ಪ್ರಸಾದ ಸ್ವೀಕಾರ ಮಾಡಿದರು.
