ಉದಯವಾಹಿನಿ, ಕಲಬುರಗಿ: ಚಾಲಕನ ನಿಯಂತ್ರಣ ತಪ್ಪಿ ಕಬ್ಬು ತುಂಬಿಕೊಂಡು ಹೊರಟಿದ್ದ ಲಾರಿ ಭೀಮಾ ನದಿಗೆ ಉರುಳಿ ಬಿದ್ದ ಪರಿಣಾಮ ಚಾಲಕ ನಾಪತ್ತೆಯಾದ ಘಟನೆ ದೇವಲಗಾಣಗಾಪುರ ಬಳಿ ಸಂಭವಿಸಿದೆ.  ಇಟಗಾ-ಗಾಣಗಾಪುರ ಗ್ರಾಮದ ಮಧ್ಯೆ ಇರುವ ಭೀಮಾ ನದಿ ಸೇತುವೆ ಮೇಲೆ ಲಾರಿ ಹೊರಟಿದ್ದಾಗ ಈ ದುರ್ಘಟನೆ ನಡೆದಿದೆ.ಅಗ್ನಿಶಾಮಕ ದಳ ಸಿಬ್ಬಂದಿ ಘಟನಾ ಸ್ಥಳಕ್ಕೆ ಧಾವಿಸಿದ್ದು ನಾಪತ್ತೆಯಾದ ಲಾರಿ ಚಾಲಕನಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ. ದೇವಲಗಾಣಗಾಪುರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Leave a Reply

Your email address will not be published. Required fields are marked *

error: Content is protected !!