ಉದಯವಾಹಿನಿ, ನವದೆಹಲಿ: ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದಾಳಿ ಖಂಡಿಸಿ ಪ್ರತಿಭಟನೆ ನಡೆಸಿ ಢಾಕಾ ಪೊಲೀಸರಿಂದ ಬಂಧನಕ್ಕೊಳಗಾಗಿರುವ ಹಿಂದೂ ಸನ್ಯಾಸಿ ಚಿನಯ್ ಕೃಷ್ಣ ದಾಸ್ ಬ್ರಹಚಾರಿಯವರ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.
ಜಾಮೀನು ಕೋರಿ ಚಟ್ಟೋಗ್ರಾಮ್ ನ್ಯಾಯಾಲಯಕ್ಕೆ ಚಿನಯ್ ಕೃಷ್ಣ ದಾಸ್ ಬ್ರಹಚಾರಿ ಅರ್ಜಿ ಸಲ್ಲಿಸಿದ್ದರು. ಢಾಕಾದಿಂದ ಬಂದಿದ್ದ ಸುಪ್ರೀಂಕೋರ್ಟ್ನ 11 ವಕೀಲರ ತಂಡವು ಅರ್ಧಗಂಟೆಗೂ ಹೆಚ್ಚು ಕಾಲ ವಾದ ಮಂಡಿಸಿದ್ದರು. ಎರಡೂ ಕಡೆಯ ವಾದವನ್ನು ಆಲಿಸಿದ ನಂತರ ನ್ಯಾಯಾಧೀಶ ಎಂ.ಡಿ ಸೈಫುಲ್ ಇಸ್ಲಾಂ ಅವರ ಪೀಠ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.
ಢಾಕಾದಿಂದ ಚಟ್ಟೋಗ್ರಾಮ್ಗೆ ತೆರಳಿದ್ದ ಸುಪ್ರೀಂ ಕೋರ್ಟ್ನ 11 ವಕೀಲರ ತಂಡವು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಿದ ಮೆಟೋಪಾಲಿಟನ್ ಸೆಷನ್‌್ಸ ನ್ಯಾಯಾಧೀಶ ಎಂಡಿ ಸೈಫುಲ್ ಇಸ್ಲಾಂ ಅವರು ಸುಮಾರು 30 ನಿಮಿಷಗಳ ಕಾಲ ಎರಡೂ ಕಡೆಯ ವಾದಗಳನ್ನು ಆಲಿಸಿದ ನಂತರ ಹಿಂದೂ ಸನ್ಯಾಸಿ ಚಿನಯ್ ಕೃಷ್ಣ ದಾಸ್ ಬ್ರಹಚಾರಿ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದರು ಎಂದು ಢಾಕಾ ಮೂಲದ ದಿ ಡೈಲಿ ಸ್ಟಾರ್ ವರದಿ ಮಾಡಿದೆ. ಚಟ್ಟೋಗ್ರಾಮ್ನ ನ್ಯಾಯಾಲಯವು ಜಾಮೀನು ತಿರಸ್ಕರಿಸಿದ ಹಿನ್ನೆಲೆಯಲ್ಲಿ ಹೈಕೋರ್ಟ್ಗೆ ಮೇಲನವಿ ಸಲ್ಲಿಸಲು ನಿರ್ಧಾರ ಮಾಡಲಾಗಿದೆ ಎಂದು ಚಿನಯ್ ಅವರ ವಕೀಲ ಭಟ್ಟಾಚಾರ್ಜಿ ಡೈಲಿ ಸ್ಟಾರ್ಗೆ ತಿಳಿಸಿದ್ದಾರೆ.
