ಉದಯವಾಹಿನಿ, ಕೆಂಗೇರಿ: ಬೆಸ್ಕಾಂನಿಂದ ಪಾದ ಚಾರಿಮಾರ್ಗ ಒತ್ತುವರಿಯಾಗಿದ್ದು , ಕಣ್ಣು ಮುಚ್ಚಿ ಕುಳಿತಿರುವ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಜನಾಕ್ರೋಶ ವ್ಯಕ್ತಪಡಿಸಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಉಲ್ಲಾಳ್ ವಾರ್ಡ್ ಮಾಗಡಿ- ಕೆಂಗೇರಿ ಉಪನಗರ ಲಿಂಕ್ ರಸ್ತೆ ಸೊನ್ನೇನಹಳ್ಳಿಯ ಸರ್ ಎಂ ವಿಶ್ವೇಶ್ವರಯ್ಯ ನಾಲ್ಕನೇ ಹಂತದ ಮುಖ್ಯ ರಸ್ತೆಯಲ್ಲಿ ಬೆಸ್ಕಾಂನ ೧೩ ಪೀಡರ್ ಓಡಿ (ಆಪರೇಟಿಂಗ್ ಡಿವೈಸ್ ) ಗಳನ್ನು ಪಾದ ಚಾರಿಮಾರ್ಗದಲ್ಲಿ ಅಳವಡಿಸುವ ಮೂಲಕ ಸಾರ್ವಜನಿಕರು ಓಡಾಡಿದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು ಇಡೀ ಸಾರ್ವಜನಿಕರು ಶಾಪ ಹಾಕುತ್ತಿದ್ದಾರೆ.
ಪಾ ದ ಚಾರಿಮಾರ್ಗದಲ್ಲಿಯೇ ಔಆ ಅಳವಡಿಸಿದ್ದರು ಬಿಬಿಎಂಪಿ ಅಧಿಕಾರಿಗಳು ಇತ್ತ ತಿರುಗಿ ನೋಡದೆ ಕಣ್ಮುಚ್ಚಿ ಕುಳಿತಿದ್ದಾರೆ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಾದಚಾರಿ ಮಾರ್ಗದಲ್ಲಿ ಫೀಡರ್ ಇರುವುದರಿಂದ ಅಲ್ಲಿ ಓಡಾಡಲು ಭಯ ಪಡುತ್ತಿದ್ದಾರೆ.ಹೂವು ಹಣ್ಣು ಹಂಪಲು ತರಕಾರಿ ಬೀದಿಯಲ್ಲಿ ಮಾರಾಟ ಮಾಡುವವರು ವಿರುದ್ಧ ಕಠಿಣ ಕ್ರಮ ಕೈಗೊಳ್ಳವ ಬಿಬಿಎಂಪಿ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಹಲವು ಅನುಮಾನ ಗಳಿಗೆ ಎಡೆ ಮಾಡಿಕೊಟ್ಟಿದೆ.
