ಉದಯವಾಹಿನಿ, ಕೋಲಾರ: ಭಾರತದ ೪೪೦ ಜಿಲ್ಲೆಗಳಲ್ಲಿ ಅಂತರ್ಜಲದಲ್ಲಿ ಹೆಚ್ಚಿನ ಮಟ್ಟದ ನೈಟ್ರೇಟ್ ಕಂಡು ಬಂದಿದೆ. ಈ ನೀರು ಕುಡಿಯಲು ಯೋಗ್ಯವಲ್ಲ ಎಂದು ಕೇಂದ್ರೀಯ ಅಂತರ್ಜಲ ಮಂಡಳಿ ವರದಿಯಲ್ಲಿ ಮಾಹಿತಿಯನ್ನು ಬಹಿರಂಗ ಪಡೆಸಿದೆ.
ಸಿ.ಜಿ.ಡಬ್ಲ್ಯೂಬಿ ( ಕೇಂದ್ರೀಯ ಅಂತರ್ಜಲ ಮಂಡಳಿ ) ಸಂಗ್ರಹಿಸಿರುವ ಮಾದರಿಯಲ್ಲಿ ೨೦ ಪ್ರತಿಶತದಷ್ಟು ನೈಟ್ರೇಟ್ ಸಾಂದ್ರತೆಯು ಮಿತಿಗಿಂತ ಹೆಚ್ಚಿದೆ ಎಂದು ವರದಿಯಲ್ಲಿ ತಿಳಿಸಿದೆ. ನೈಟ್ರೇಟ್ ಮಾಲಿನ್ಯವು ಪರಿಸರ ಮತ್ತು ಅರೋಗ್ಯಕ್ಕೆ ಗಂಭೀರ ಪರಿಣಾಮ ಉಂಟು ಮಾಡುವುದಲ್ಲದೆ ಸಾರಜನಕ ಅಧಾರಿತ ರಸ ಗೊಬ್ಬರಗಳು ಮತ್ತು ಪ್ರಾಣಿಗಳ ತ್ಯಾಜ್ಯವನ್ನು ಸಾವಯವ ಬಳಸುವ ಪ್ರದೇಶಗಳಲ್ಲಿ ಇದು ಪರಿಣಾಮ ಬೀರುತ್ತದೆ ಎನ್ನಲಾಗಿದೆ. ದೇಶದಲ್ಲಿಯೇ ಅತಿ ಹೆಚ್ಚು ಕೊಳವೆ ಬಾವಿಗಳನ್ನು ಕೊರೆದಿರುವ ಜಿಲ್ಲೆ ಯಾವೂದಾದರರೂ ಇದೆ ಎಂದರೆ ಅದು ಕೋಲಾರ ಜಿಲ್ಲೆಯಾಗಿದ್ದು ಪ್ರಥಮ ಸ್ಥಾನದಲ್ಲಿದೆ ಅಂತರ್ಜಲ ಮಟ್ಟ ೧೫೦೦ ಅಡಿಗಳಿಗಿಂತ ಹೆಚ್ಚು ಅಡಿಗಳು ಕೊರೆದು ಪಾತಳ ದಿಂದ ನೀರನ್ನು ಬಗೆದು ಕೃಷಿಯನ್ನು ಮಾಡಿರುವ ಶ್ರಮ ಜೀವಿಗಳ ಜಿಲ್ಲೆಯಾಗಿದೆ. ಇದರ ಜೂತೆಗೆ ನೆರೆ ಜಿಲ್ಲೆಗಳಾದ ಚಿಕ್ಕಬಳ್ಳಾಪುರವು, ತುಮಕೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಸೇರಿದಂತೆ ರಾಮನಗರ, ಚಿತ್ರದುರ್ಗ, ದಾವಣಗೆರೆ, ಹಾವೇರಿ, ಧಾರವಾಡ,. ಗದಗ ವಿಜಯ ನಗರ, ಬಿಜಾಪುರ, ಬಳ್ಳಾರಿ, ವಿಜಯ ನಗರ,ಯಾದಗಿರಿ,ರಾಯಚೂರು ಸೇರಿದಂತೆ ರಾಜ್ಯದ ೧೯ ಜಿಲ್ಲೆಗಳಲ್ಲಿ ಅಂತರ್ಜಲದಲ್ಲಿ ನಿರೀಕ್ಷಿತ ಮಟ್ಟಕ್ಕಿಂತ ಹೆಚ್ಚಿನ ಪ್ಲೋರೈಡ್ ಕಂಡು ಬಂದಿದ್ದು ಈ ಜಿಲ್ಲೆಗಳ ಬೋರ್ ವೆಲ್ ನೀರನ್ನು ನೇರವಾಗಿ ಕುಡಿಯಲು ಯೋಗ್ಯವಿಲ್ಲ ಎಂದು ವರದಿಯಲ್ಲಿ ಸ್ವಷ್ಟ ಪಡೆಸಿದೆ.
