ಉದಯವಾಹಿನಿ, ಕೋಲಾರ: ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಅವರಿಗೆ ಅವಮಾನ ಪಡೆಸಿರುವ ಕೇಂದ್ರ ಗೃಹ ಸಚಿವ ಅಮಿತ್ ಷಾ ರಾಜಿನಾಮೆಗೆ ಒತ್ತಾಯಿಸಿ ದಲಿತ ಪರ ಸಂಘಟನೆ, ರೈತ ಸಂಘಟನೆ, ಜಿಲ್ಲಾ ಕಾಂಗ್ರೇಸ್ ಎಸ್.ಸಿ.ಎಸ್.ಟಿ. ಘಟಕ, ಕಾರ್ಮಿಕ ಸಂಘ, ಹಿಂದುಳಿದ ಒಕ್ಕೂಟ, ಆಲ್ಪಸಂಖ್ಯಾತರ ಒಕ್ಕೂಟ ಸೇರಿದಂತೆ ವಿವಿಧ ಸಂಘಟನೆಗಳು ನಗರದಲ್ಲಿ ಶುಕ್ರವಾರ ಬೆಳ್ಳಂಬೆಳಿಗ್ಗೆಯೇ ನಗರದ ಕೆ.ಎಸ್.ಆರ್.ಟಿ.ಸಿ. ಹಾಗೂ ಕೆ.ಎಸ್.ಆರ್.ಟಿ.ಸಿ. ಡಿಪೋ ಬಳಿ ಯಾವೂದೇ ವಾಹನಗಳು ಹೊರಗೆ ಬಾರದಂತೆ ರಸ್ತೆಯ ತಡೆ ನಡೆಸಿ ಟೈರುಗಳಿಗೆ ಬೆಂಕಿ ಹಚ್ಚಿ ಪ್ರತಿಭಟಿಸಿದರು.
ನಗರದಲ್ಲಿ ಬಂದ್ ಆಚರಣೆಯ ಸಂಬಂಧ ಸಾಕಷ್ಟು ಪ್ರಚಾರ ಮಾಡಿದ್ದ ಹಿನ್ನಲೆ ಅಂಗಡಿ ಮುಂಗಟ್ಟುಗಳು, ಹೋಟೆಲ್‌ಗಳು, ಸಿನಿಮ ಮಂದಿರಗಳು, ಶಾಲಾ ಕಾಲೇಜುಗಳು, ಸರ್ಕಾರಿ ಹಾಗೂ ಕೇಂದ್ರ ಸರ್ಕಾರದ ಕಚೇರಿಗಳು , ಬ್ಯಾಂಕ್‌ಗಳು, ಬೆಳಿಗ್ಗೆ ಕೆಲಸ ನಿರ್ವಹಿಸುತ್ತಿದ್ದ ಹಿನ್ನಲೆಯಲ್ಲಿ ಪ್ರತಿಭಟನಕಾರರು ಘೋಷಣೆಗಳು ಕೊಗಿ ಪ್ರತಿಭಟಿಸಿದ ಹಿನ್ನಲೆಯಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಚೇರಿಯಿಂದ ಹೊರ ಬಂದು ಬಾಗಿಲಿಗೆ ಬೀಗ ಜಡಿದರು.
