ಉದಯವಾಹಿನಿ, ಮುಡಿಪು: ಮಾನವೀಯತೆಯನ್ನು ಅರಳಿಸುವ ಸಾಹಿತ್ಯ ನಮಗೆ ಕಿಟಕಿ ಇದ್ದಂತೆ. ಈ ಕಿಟಕಿಯ ಮೂಲಕ ನಾವು ಜಗತ್ತನ್ನು ಅರ್ಥಮಾಡಿ ಕೊಳ್ಳಬಹುದಾಗಿದೆ. ವಿದ್ಯಾರ್ಥಿಗಳು ಭಾಷೆ ಮತ್ತು ಸಾಹಿತ್ಯವನ್ನು ಆಸಕ್ತಿಯಿಂದ ಕಲಿತರೆ ಉತ್ತಮ ಪ್ರಜೆಗಳಾಗಿ ಬೆಳೆಯಬಹುದು ಎಂದು ಕರ್ನಾಟಕ ವಿಧಾನಸಭೆಯ ಅಧ್ಯಕ್ಷ ಯು.ಟಿ.ಖಾದರ್ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಉಳ್ಳಾಲ ತಾಲ್ಲೂಕು ಘಟಕ, ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನ ಮಂಗಳೂರು, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮಂಗಳೂರು ದಕ್ಷಿಣ ವಲಯ, ರಾಮಕೃಷ್ಣ ಅನುದಾನಿತ ಪ್ರೌಢಶಾಲೆ ಪಾವೂರು ಹರೇಕಳದ ಆಶ್ರಯದಲ್ಲಿ ಹರೇಕಳ ಶ್ರೀರಾಮಕೃಷ್ಣ ಪ್ರೌಢಶಾಲೆಯಲ್ಲಿ ಉಳ್ಳಾಲ ತಾಲ್ಲೂಕು ಪ್ರಥಮ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ದ.ಕ ಜಿಲ್ಲಾ ಕಸಾಪ ಅಧ್ಯಕ್ಷ ಎಂ.ಪಿ.ಶ್ರೀನಾಥ್ ಮಾತನಾಡಿ, ಮಕ್ಕಳು ಇರುವಲ್ಲಿಗೆ ಸಾಹಿತ್ಯ ಪರಿಷತ್ ತೆರಳಿ ಗ್ರಾಮಗಳಲ್ಲಿ ಕಾರ್ಯಕ್ರಮ ನಡೆಸುತ್ತಿದೆ ಎಂದರು.
ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಧನಂಜಯ ಕುಂಬ್ಳೆ ಮಾತನಾಡಿದರು. ಹರೇಕಳ ಗ್ರಾಮ ಪಂಚಾಯಿತಿ ಆವರಣದಿಂದ ಆರಂಭವಾದ ಜಾನಪದ ದಿಬ್ಬಣಕ್ಕೆ ಹರೇಕಳ ಗ್ರಾ.ಪಂ ಅಧ್ಯಕ್ಷತೆ ಗುಲಾಬಿ ಚಾಲನೆ ನೀಡಿದರು. ಹರೇಕಳ ಹಾಜಬ್ಬ ಕಸಾಪ ತಾಲ್ಲೂಕು ಘಟಕದ ಗೌರವ ಕಾರ್ಯದರ್ಶಿ ರವೀಂದ್ರ ರೈ ಕಲಿಮಾರ್, ಪ್ರಮುಖರಾದ ಕೆ.ಎನ್.ಆಳ್ವ, ಪ್ರೊ.ಭಾಸ್ಕರ್ ರೈ ಕುಕ್ಕುವಳ್ಳಿ, ಕಡೆಂಜ ಸೋಮಶೇಖರ್ ಚೌಟ, ಚಂದ್ರಹಾಸ ಶೆಟ್ಟಿ ದೇರಳಕಟ್ಟೆ, ಸುರೇಶ್ ಅಷ್ಟೆ, ಚಂದ್ರಶೇಖರ್ ಶೆಟ್ಟಿ ಮಂಟಮೆ ಪೋಡಾರು ಜಯರಾಮ ಆತ್ಮ, ರಾಧಾಕೃಷ್ಣ ರಾವ್, ಕೃಷ್ಣಕುಮಾರ್ ಕಮ್ಮಾಜೆ, ವಿಜಯಲಕ್ಷ್ಮಿ ಕಟೀಲು, ಎಡ್ವರ್ಡ್ ಲೋಬೊ, ಗೀತಾ ಜುಡಿತ್ ಸಲ್ಮಾನ, ಜಯಲಕ್ಷ್ಮಿ, ಮೋಹಿನಿ, ಸಮ್ಮೇಳನ ಸಂಚಾಲಕ ತ್ಯಾಗಮ್ ಹರೇಕಳ ಭಾಗವಹಿಸಿದ್ದರು.
