ಉದಯವಾಹಿನಿ,ಕಲಬುರಗಿ : ಇಬ್ಬರು ಅಂತರ್ ಜಿಲ್ಲಾ ಕಳ್ಳರನ್ನು ಬಂಧಿಸಿರುವ ಶಹಾಬಾದ ನಗರ ಠಾಣೆ ಪೊಲೀಸರು ೨ ತೊಲೆ ಬಂಗಾರ, ೧೦ ತೊಲೆ ಬೆಳ್ಳಿ ಮತ್ತು ನಗದು ಹಣ ಸೇರಿ ೧.೫೦ ಲಕ್ಷ ರೂಪಾಯಿ ಮೌಲ್ಯದ ನಗನಾಣ್ಯ ಜಪ್ತಿ ಮಾಡಿದ್ದಾರೆ.
ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದ ಸಮೀರ್ ತಂದೆ ಜಿಲಾನ್ ಶೇಖ್ ಮತ್ತು ಸಾಹೀಲ್ ತಂದೆ ಮಹ್ಮದ್ ರಫೀಕ್ ಎಂಬುವವರೆ ಬಂಧಿತ ಆರೋಪಿಗಳಾಗಿದ್ದು, ಇವರು ಈ ಮೊದಲು ವಾಡಿ, ಯಾದಗೀರ ಮತ್ತು ಶಹಾಪುರ ಪಟ್ಟಣಗಳಲ್ಲಿ ಬಟ್ಟೆ ಅಂಗಡಿಗಳನ್ನು ಕಳ್ಳತನ ಮಾಡಿದ್ದರು ಎಂದು ತಿಳಿದುಬಂದಿದೆ.ಮನೆ ಬೀಗ ಮುರಿದು ಚಿನ್ನ, ಬೆಳ್ಳಿ ಆಭರಣ ಮತ್ತು ನಗದು ಹಣ ಕಳವು ಮಾಡಲಾಗಿದೆ ಎಂದು ಶಹಾಬಾದನ ಶಿವಾಜಿ ನಗರದ ಬಲರಾಮ ರಾಠೋಡ್ ಅವರು ಶಹಾಬಾದ ನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.

ಈ ದೂರಿನ ಅನ್ವಯ ಹೆಚ್ಚುವರಿ ಎಸ್‌ಪಿ ಮಹೇಶ ಮೇಘಣ್ಣನವರ್, ಶಹಾಬಾದ ಡಿಎಸ್‌ಪಿ ಶಂಕರಗೌಡ ಪಾಟೀಲ ಅವರ ಮಾರ್ಗದರ್ಶನದಲ್ಲಿ ಶಹಾಬಾದ ಪಿಐ ನಟರಾಜ ಲಾಡೆ, ಪಿಎಸ್‌ಐ ಶಾಮರಾಯ ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ದೊಡ್ಡಪ್ಪ, ನಾಗೇಂದ್ರ, ಬಸವರಾಜ, ಸಂತೋಷ, ಹುಸೇನ ಪಾಷಾ ಅವರನ್ನು ಒಳಗೊಂಡ ತಂಡ ರಚಿಸಲಾಗಿತ್ತು. ಈ ತಂಡ ತನಿಖೆ ನಡೆಸಿ ಅಂತರ್ ಜಿಲ್ಲಾ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

Leave a Reply

Your email address will not be published. Required fields are marked *

error: Content is protected !!