ಉದಯವಾಹಿನಿ, ಸಿಡ್ನಿ: ಕಾಂಗರೂ ನಾಡಿನಲ್ಲಿ ಕಳೆದ ದಶಕದಿಂದಲೂ ಸರಣಿ ಜಯಿಸುತ್ತ ಬಂದಿದ್ದ ಟೀಮ್ ಇಂಡಿಯಾದ ಅಜೇಯ ಓಟಕ್ಕೆ ಸಿಡ್ನಿಯಲ್ಲಿ 6 ವಿಕೆಟ್ ಗಳ ಅಂತರದಿಂದ ಸೋಲುವ ಮೂಲಕ ತೆರೆ ಬಿದ್ದಿದೆ.
ಬಾರ್ಡರ್- ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ 2016 ರಿಂದಲೂ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಟೀಮ್ಇಂಡಿಯಾ ಕಾಂಗರೂ ನಾಡಿನಲ್ಲಿ 2018-19 ಹಾಗೂ 2020-21ರಲ್ಲಿ ಟೆಸ್ಟ್ ಸರಣಿಗಳನ್ನು ಗೆದ್ದಿದ್ದು ಈ ಬಾರಿ ಹ್ಯಾಟ್ರಿಕ್ ಗೆಲುವಿನ ಸಂಭ್ರಮ ಕಾಣುವ ಭರವಸೆ ಮೂಡಿಸಿತ್ತು.
ಅದಕ್ಕೆ ತಕ್ಕಂತೆ ಪರ್ತ್ ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ 295 ರನ್ ಗಳ ಭರ್ಜರಿ ಗೆಲುವು ಸಾಧಿಸಿ 5 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದ ಭಾರತ ತಂಡಕ್ಕೆ ಎರಡನೇ ಪಂದ್ಯದಿಂದ ರೋಹಿತ್ ಶರ್ಮಾ ಕ್ಯಾಪ್ಟನ್ಸಿ ಸ್ಥಾನಕ್ಕೆ ಮರಳಿದ ನಂತರ ಸೋಲಿನ ಸುಳಿಗೆ ಸುಲಿಕಿತು.
ಅಡಿಲೇಡ್ ನಲ್ಲಿ ನಡೆದ ದ್ವಿತೀಯ ಪಂದ್ಯದಲ್ಲಿ 10 ವಿಕೆಟ್ ಸೋಲು ಕಂಡ ಭಾರತ, ಬ್ರಿಸ್ಬೇನ್ ಪಂದ್ಯವನ್ನು ಡ್ರಾ ಮಾಡಿಕೊಂಡರೂ, ಮೆಲ್ಬೋರ್ನ್ ಹಾಗೂ ಸಿಡ್ನಿಯಲ್ಲಿ ನಡೆದ ಪಂದ್ಯಗಳಲ್ಲಿ ಭಾರತ ತಂಡವು ಕ್ರಮವಾಗಿ 184 ಹಾಗೂ 6 ವಿಕೆಟ್ಗಳ ಸೋಲು ಕಂಡು ಸರಣಿಯನ್ನು 3-1 ರಿಂದ ಕಳೆದುಕೊಂಡಿದೆ.
ಕಾಡಿದ ಬೂಮ್ರಾ ಅನುಪಸ್ಥಿತಿ: ಸಿಡ್ನಿಯಲ್ಲಿ ನಡೆದ ಟೆಸ್ಟ್ ಪಂದ್ಯದ 4ನೇ ಇನಿಂಗ್‌್ಸ ನಲ್ಲಿ 162 ರನ್ ಗಳ ಟಾರ್ಗೆಟ್ ಪಡೆದ ಆಸ್ಟ್ರೇಲಿಯಾ ಗೆಲ್ಲುವ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿತ್ತು. ಇದಕ್ಕೆ ತಕ್ಕಂತೆ ನಾಯಕ ಜಸ್ ಪ್ರೀತ್ ಬೂಮ್ರಾ ಬೆನ್ನು ನೋವಿನಿಂದ ಬೌಲಿಂಗ್ ಮಾಡದೆ ಇರುವುದು ಪ್ಯಾಟ್ ಕಮಿನ್‌್ಸ ತಂಡಕ್ಕೆ ವರವಾಯಿತು.
