ಉದಯವಾಹಿನಿ, ಹಾಸನ: ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ವತಿಯಿಂದ ಹಮ್ಮಿಕೊಂಡಿರುವ ಎರಡು ದಿನಗಳ ಕಾಲ ಹಾಸನ ಸಾಹಿತ್ಯೋತ್ಸವ ಸೋಮವಾರ (ಡಿ.6) ಆರಂಭವಾಗಲಿದೆ. ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ನಡೆಯುವ ಸಾಹಿತ್ಯ ಹಬ್ಬಕ್ಕೆ ಡಿ.6 ರಂದು ಬೆಳಿಗ್ಗೆ, 10 ಗಂಟೆಗೆ ಡಾ.ಹಂಪ ನಾಗರಾಜಯ್ಯ ಚಾಲನೆ ನೀಡಲಿದ್ದಾರೆ. ಸಾಹಿತಿ ಡಾ.ಚಂದ್ರಶೇಖರ ಕಂಬಾರ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಕೇಂದ್ರ ಕಸಾಪ ಅಧ್ಯಕ್ಷ ಮಹೇಶ್ ಜೋಶಿ, ಶಾಸಕ ಎಚ್.ಪಿ. ಸ್ವರೂಪ್ ಪ್ರಕಾಶ್, ಜಿಲ್ಲಾಧಿಕಾರಿ ಸಿ.ಸತ್ಯಭಾಮಾ, ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ಅಶೋಕ್ ಹಾರನಹಳ್ಳಿ, ನಗರಸಭೆ ಅಧ್ಯಕ್ಷ ಎಂ.ಚಂದ್ರೇಗೌಡ, ಸಾಹಿತ್ಯೋತ್ಸವದ ಅಧ್ಯಕ್ಷ ಎಚ್.ಬಿ.ಮದನಗೌಡ ಭಾಗವಹಿಸುವರು. ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಎಚ್.ಎಲ್.ಮಲ್ಲೇಶಗೌಡ ಪ್ರಾಸ್ತಾವಿಕವಾಗಿ ಮಾತನಾಡಲಿದ್ದು, ಬಿ.ಆರ್. ಲಕ್ಷ್ಮಣರಾವ್, ಸಂಚಾಲಕರ ನುಡಿ ಆಡುವರು.
ಗಿರೀಶ್‌ರಾವ್ ಹತ್ಯಾರ್(ಜೋಗಿ) ಆಶಯ ನುಡಿಗಳನ್ನಾಡುವರು. ಮೊದಲ ದಿನ ಬೆಳಿಗ್ಗೆ 11.45 ರಿಂದ 1 ಗಂಟೆಯವರೆಗೆ ನಡೆಯುವ ಗೀತ ಸಂಗೀತ ಗೋಷ್ಠಿಯನ್ನು ಬನುಮ ಗುರುದತ್ ನಿರ್ವಹಣೆ ಮಾಡಲಿದ್ದಾರೆ. ಶ್ರೀನಿವಾಸ ಪ್ರಭು, ಪಂಚಮ ಹಳಿಬಂಡಿ, ನಾಗಚಂದ್ರಿಕಾ ಭಟ್, ಕೀಬೋರ್ಡಲ್ಲಿ ಕೃಷ್ಣ ಉಡುಪ, ತಬಲದಲ್ಲಿ ಎಂ.ಸಿ. ಶ್ರೀನಿವಾಸ್ ಭಾಗವಹಿಸಲಿದ್ದಾರೆ. ಮಧ್ಯಾಹ್ನ 2 ರಿಂದ 2.45 ರವರೆಗೆ ನಡೆಯುವ ನಮ್ಮ ನೆಲೆ-ನಮ್ಮ ಸೆಲೆ ಗೋಷ್ಠಿಯಲ್ಲಿ ಸಂಧ್ಯಾರಾಣಿ, ಪಿ.ಚಂದ್ರಿಕಾ, ರೇಣುಕಾ ರಮಾನಂದ ಭಾಗವಹಿಸುವರು.
