ಉದಯವಾಹಿನಿ, ಬೆಂಗಳೂರು: ಅಬಾಕಸ್ ಕಲಿಸುವಾಗ ಕೇವಲ ಗಣಿತ ಮಾತ್ರವಲ್ಲದೇ, ಮಕ್ಕಳಲ್ಲಿ ಏಕಾಗ್ರತೆಯೂ ಬೆಳೆಯುತ್ತದೆ. ಆದ್ದರಿಂದ ಮಕ್ಕಳಲ್ಲಿ ಬೆಳವಣಿಗೆಗೆ ಅಬಾಕಸ್ ಪೂರಕವಾಗುತ್ತದೆ ಎಂದು ಎಸ್.ಐ.ಪಿ. ಅಬಾಕಸ್ ಸಂಸ್ಥೆಯ ಕರ್ನಾಟಕದ ಮುಖ್ಯಸ್ಥ ನರೇಂದ್ರ ಎಚ್.ಎನ್. ಹೇಳಿದರು.
ಪ್ಯಾಲೆಸ್ ಗ್ರಿಂಡ್‌ನ ಮಾಣಿಕ್ಯ ಹಾಲ್ ನಲ್ಲಿ ಹಮ್ಮಿಕೊಂಡಿದ್ದ ಎಸ್.ಐ.ಪಿ. ಪ್ರೊಡಿಜಿ ಸ್ಪರ್ಧೆಯ ವೇಳೆ ಮಾತನಾಡಿದ ಅವರು, ಅನೇಕ ಮಕ್ಕಳಿಗೆ ಕಬ್ಬಿಣದ ಕಡಲೆಯಾಗಿರುವ ಗಣಿತವನ್ನು ಸುಲಭ ರೀತಿಯಲ್ಲಿ ಕಲಿಸುವುದು ಅಬಾಕಸ್‌ನ ಉದ್ದೇಶ. ಆದರೆ ಕೇವಲ ಅದಷ್ಟೇ ಅಲ್ಲದೇ, ನಮ್ಮ ತರಬೇತಿಯ ವೇಳೆ ನಾವು ಮಕ್ಕಳಿಗೆ ಏಕಾಗ್ರತೆಯನ್ನು ಕಲಿಸುತ್ತೇವೆ. ಇದರಿಂದಾಗಿ ಮಕ್ಕಳಿಗೆ ಕೇವಲ ಗಣಿತ ಮಾತ್ರವಲ್ಲದೇ, ಎಲ್ಲ ವಿಷಯಗಳಲ್ಲಿಯೂ ಸಹಾಯವಾಗುತ್ತದೆ. ಇದರಿಂದ ಶಾಲೆಗಳಲ್ಲಿ ಶಿಕ್ಷಕರು ಯಾವ ವಿಷಯದ ಬಗ್ಗೆ ಪಾಠ ಮಾಡಿದರೂ, ಅದನ್ನು ಸುಲಭವಾಗಿ ಅರ್ಥೈಸಿಕೊಳ್ಳುವ ಸಾಮರ್ಥ್ಯ ಮಕ್ಕಳಿಗೆ ಬರುತ್ತದೆ. ಕೇವಲ ಪಠ್ಯ ಮಾತ್ರವಲ್ಲದೇ, ಕ್ರೀಡೆ, ಕಲೆ, ಸಂಸ್ಕೃತಿಯ ಸಮಯದಲ್ಲಿಯೂ ಈ ಏಕಾಗ್ರತೆ ಮಕ್ಕಳ ಸಹಾಯಕ್ಕೆ ಬರಲಿದೆ ಎಂದು ಹೇಳಿದರು.
