ಉದಯವಾಹಿನಿ, ಬಸವನ ಬಾಗೇವಾಡಿ : ಕೇಂದ್ರ ಸಚಿವ ಅಮಿತ್ ಶಾ ಹೇಳಿಕೆ ಖಂಡಿಸಿ ದಲಿತ ಸಂಘರ್ಷ ಸಮಿತಿಯಿಂದ ಅರೆಬೆತ್ತಲೆ ಪ್ರತಿಭಟನೆ ನಡೆಸಲಾಯಿತು. ಅಂಬೇಡ್ಕರ್ ಸರ್ಕಲ ದಿಂದ ಪ್ರಾರಂಭವಾಗಿ ಬಸವೇಶ್ವರ ಸರ್ಕಲ್‌ದಲ್ಲಿ ಅಮಿತ್ ಶಾ ಅವರ ಪ್ರತಿಕೃತಿ ದಹಿಸಲಾಯಿತು. ತಾಲೂಕ ಡಿಎಸ್‌ಎಸ್ ಮುಖಂಡ ಅರವಿಂದ ಸಾಲವಾಡಗಿ ಮಾತನಾಡಿ ಸಚಿವ ಅಮಿತ್ ಶಾ ಅವರು ಸಂವಿಧಾನದ ಬಗ್ಗೆ ತಿಳುವಳಿಕೆ ಇಲ್ಲದೆ ಈ ರೀತಿ ಮಾತನಾಡುವುದು ಅವರ ವ್ಯಕ್ತಿತ್ವಕ್ಕೆ ಸರಿಯಲ್ಲ ಅಂತ ವ್ಯಕ್ತಿಗಳನ್ನು ಮೋದಿಯವರು ತಮ್ಮ ಸಂಪುಟದಿAದ ಕೈಬಿಡಬೇಕೆಂದು ಆಗ್ರಹಿಸಿದರು. ಪರಶುರಾಮ್ ದಿಂಡವಾರ ಸೇರಿದಂತೆ ಅನೇಕ ಡಿಎಸ್‌ಎಸ್ ಮುಖಂಡರು ಮಾತನಾಡಿ ದರು. ಅಶೋಕ ಚಲವಾದಿ ಮಾಂತೇಶ್ ಸಾಸಬಾಳ ಗುರುಗುಡಿಮನಿ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.
