ಉದಯವಾಹಿನಿ, ಬೀದರ್: ಕೊಲ್ಲನಪಾಕ ಸುಕ್ಷೇತ್ರ ವೀರಶೈವ ಧರ್ಮದ ಪವಿತ್ರ ಕ್ಷೇತ್ರವಾಗಿದ್ದು ಈ ಕ್ಷೇತ್ರವನ್ನು ವೀರಶೈವ ಧರ್ಮ ಪರಂಪರೆಯ ಶ್ರದ್ಧಾ ಕೇಂದ್ರವನ್ನಾಗಿ ನಿರ್ಮಿಸುವ ಉದ್ದೇಶ ನಮ್ಮದಾಗಿದೆ ಎಂದು ರಂಭಾಪುರಿ ಜಗದ್ಗುರುಗಳು ತಿಳಿಸಿದರು. ಮಂಗಳವಾರ ತೆಲಂಗಾಣ ರಾಜ್ಯದ ಕೊಲ್ಲನಪಾಕದಲ್ಲಿ ತಮ್ಮ 69ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ವೀರಶೈವ ಧರ್ಮ ಇತಿಹಾಸ ಪ್ರಸಿದ್ಧವಾದ ಧರ್ಮ. ಆದರ್ಶವನ್ನು ಮೈಗೂಡಿಸಿಕೊಂಡಿರುವ ಧರ್ಮ ಇದಾಗಿದೆ. ಈ ಧರ್ಮದ ವಿಶಾಲ ತತ್ವ ಸಿದ್ಧಾಂತಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಾರ್ಥಕ ಪಡಿಸಿಕೊಳ್ಳಬಹುದಾಗಿದೆ. ಜಗದ್ಗುರು ರೇಣುಕಾಚಾರ್ಯ ಅವತಾರ ತಾಳಿದ ಈ ಕ್ಷೇತ್ರದಲ್ಲಿ ಯಡಿಯೂರು ಶ್ರೀಗಳು ಹೇಳಿದಂತೆ 18 ಜಾತಿ ಜನಾಂಗಗಳ ಮಠಗಳದು ನಿರ್ಮಿಸಿ ಎಲ್ಲ ಮಠಗಳಿಗೆ ಒಡೆಯರಾಗಿ ಜಗದ್ಗುರು ರೇಣುಕಾಚಾರ್ಯರು ಮಾರ್ಗದರ್ಶನ ನೀಡಿದಂತಹ ಇತಿಹಾಸ ನಮ್ಮ ಕಣ್ಮುಂದೆ ಇದೆ. ಈ ದರ್ಮ ಪರಂಪರೆಯಲ್ಲಿ ಒಬ್ಬರಲ್ಲ, ಇಬ್ಬರಲ್ಲ, ಬಾಗ್ಯವಾಡಿ ಶ್ರೀಗಳು ಹೇಳಿದಂತೆ ರೇಣೂಕ ಜಗದ್ಗರುಗಳು ನಮ್ಮ ಪೂರ್ವಜರಿಗೆ ಆಯಾ ಕಾಲ ಘಟ್ಟದಲ್ಲಿ ಆದರ್ಶ ಮೌಲ್ಯಗಳನ್ನು ಬೋಧನೆ ಮಾಡಿಕೊಂಡು ಬಂದಿದ್ದಾರೆ 121ನೇ ಸ್ಥಾನವನ್ನು ಅಲಂಕರಿಸಿದಂತಹ ಹಾಲಿ ಜಗದ್ಗುರುಗಳು ಕರ್ನಾಟಕದ ಹಲವಾರು ಪ್ರಾಂತ ಪ್ರದೇಶಗಳಲ್ಲಿ ಸಂಚರಿಸಿ ಪಂಚಾಚಾರ್ಯರ ತತ್ವಗಳನ್ನು ಭಕ್ತರ ಮನೆ ಮನಕ್ಕೆ ತಲುಪಿಸುತ್ತಿದ್ದವರಾಗಿದ್ದೇವೆ.
