ಉದಯವಾಹಿನಿ, ಬೆಂಗಳೂರು : ಚಿಕ್ಕಮಗಳೂರು,ಜ.8- ಕರ್ನಾಟಕದಲ್ಲಿ ಆರು ಮಂದಿ ನಕ್ಸಲೀಯರು ಮುಖ್ಯ ವಾಹಿನಿಗೆ ಬರಲು ಸಮಯ ಕೂಡಿಬಂದಿದ್ದು, ಈ ಆರು ಮಂದಿಯ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ. ಕರ್ನಾಟಕದ ಮುಂಡಗಾರು ಲತಾ, ಸುಂದರಿ ಕುತ್ಲೂರು, ವನಜಾಕ್ಷಿ ಬಾಳೆಹೊಳೆ, ಮಾರಪ್ಪ ಆರೋಲಿ ಅಲಿಯಾಸ್ ಜಯಣ್ಣ, ತಮಿಳುನಾಡಿನ ಕೆ.ವಸಂತ ಮತ್ತು ಕೇರಳದ ಟಿಎನ್ ಜೀಶಾ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ.

ಮುಂಡಗಾರು ಲತಾ ವಿರುದ್ಧ 59 ಪ್ರಕರಣ, ಸುಂದರಿ ವಿರುದ್ಧ ಉಡುಪಿ ಹಾಗೂ ದಕ್ಷಿಣ ಕನ್ನಡದಲ್ಲಿ ಮೂರು ಪ್ರಕರಣಗಳು, ಜಯಣ್ಣ ಮೇಲೆ ಉಡುಪಿ, ಮಂಗಳೂರಿನಲ್ಲಿ ಮೂರು ಪ್ರಕರಣಗಳು ಹಾಗೂ ವನಜಾಕ್ಷಿ ವಿರುದ್ದ 15 ಪ್ರಕರಣಗಳು ದಾಖಲಾಗಿದ್ದರೆ ವಸಂತ್ ಹಾಗೂ ಜೀಶಾ ವಿರುದ್ಧ ಹಲವು ಕೇಸ್ಗಳಿವೆ. ಮುಂಡಗಾರು ಲತಾ ಶೃಂಗೇರಿಯ ಜೆಸಿಬಿಎಂ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ ಬಳಿಕ ಪಿಯುಸಿ ವ್ಯಾಸಂಗ ಅರ್ಧಕ್ಕೆ ಮೊಟಕುಗೊಳಿಸಿ ಕುದುರೆಮುಖ, ವಿಮೋಚನಾ ಚಳುವಳಿ ಮುಖಾಂತರ ನಕ್ಸಲ್ ಹೋರಾಟದಲ್ಲಿ ಸಕ್ರಿಯರಾಗಿದ್ದರು.

Leave a Reply

Your email address will not be published. Required fields are marked *

error: Content is protected !!