ಉದಯವಾಹಿನಿ, ಬೆಂಗಳೂರು: ರಿಯಲ್ ಎಸ್ಟೇಟ್ ಉದ್ಯಮಿಗಳ ಪಾರ್ಟಿಗೆ ಕಾಡು ಪ್ರಾಣಿಗಳ ಮಾಂಸ ನೀಡಲು ಬೇಟೆಯಾಡುತ್ತಿದ್ದ ಮೂವರು ಆರೋಪಿಗಳನ್ನು ಬೆಂಗಳೂರು ಸಂಚಾರಿ ಅರಣ್ಯಾಧಿಕಾರಿಗಳು ವಿಶೇಷ ಕಾರ್ಯಚರಣೆ ಮಾಡಿ ಬಂದಿಸಿದ್ದಾರೆ. ಬೆಂಗಳೂರಿನ ತೋಟದಗುಡ್ಡದಹಳ್ಳಿ ನಿವಾಸಿ ಶಾರ್ಪ್ ಶೂಟರ್ ಶ್ರೀನಿವಾಸ್(೪೬), ನೆಲಮಂಗಲದ ಹನುಮಂತರಾಜು (೪೪), ಮತ್ತು ರಾಮನಗರದ ಮುನಿರಾಜು(೩೮) ಬಂಧಿತರಾಗಿದ್ದಾರೆ.

ಅರಣ್ಯಾಧಿಕಾರಿಗಳನ್ನು ಕಂಡು ಥಾರ್ ಜೀಪ್??ನಲ್ಲಿ ಪರಾರಿಯಾಗುತ್ತಿದ್ದ ಆರೋಪಿಗಳನ್ನು ೬ ಕಿ. ಮೀ ಸಿನಿಮಾ ಶೈಲಿಯಲ್ಲಿ ಚೇಸಿಂಗ್ ಮಾಡಿ ರಾಮನಗರ ಜಿಲ್ಲೆಯ ಚಿಕ್ಕಕುಂಟನಹಳ್ಳಿ ಕ್ರಾಸ್ ಬಳಿ ಬಂಧಿಸಲಾಗಿದ್ದು ಬಂಧಿತರಿಂದ ೨ ಜಿಂಕೆ, ೨ ಕಾಡು ಹಂದಿ, ೧ ಗನ್, ೧ಏರ್ ಗನ್, ೧೧ ಜೀವಂತ ಗುಂಡು, ೨ ಚಾಕು, ೧ಕೊಡಲಿ, ೧ಮಚ್ಚು, ೩ ಮೊಬೈಲ್, ಥಾರ್ ಜೀಪ್ ಜಪ್ತಿ ಮಾಡಲಾಗಿದೆ. ಹೈ ಫ್ಲ್ಯಾಶ್ ಲೈಟ್‌ಗಳನ್ನ ಬಳಸಿ ಆರೋಪಿಗಳು ಬೇಟೆಯಾಡುತ್ತಿದ್ದರು. ಎರಡು ತಿಂಗಳ ಸತತ ಪ್ರಯತ್ನದಿಂದ ಆರೋಪಿಗಳು ಬಲೆಗೆ ಬಿದಿದ್ದಾರೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು ಅರಣ್ಯ ಸಂಚಾರಿ ದಳದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸುನಿತಾ ಬಾಯಿ, ಉಪ ಅರಣ್ಯ ಸಹಾಯಕ ಸಂರಕ್ಷಣಾಧಿಕಾರಿ ಸರಿತಾ ಮಾರ್ಗದರ್ಶನ, ಆರ್‌ಎಫ್‌ಒ ರಮೇಶ್, ಸಿದ್ದರಾಜು, ಅಮೃತ್ ದೇಸಾಯಿ, ರಾಜು, ಆಶಾ, ಚಾಲಕ ಸುರೇಶ್ ನೇತೃತ್ವದ ತಂಡದ ವಿಶೇಷ ಕಾರ್ಯಚರಣೆ ಮೂಲಕ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.

Leave a Reply

Your email address will not be published. Required fields are marked *

error: Content is protected !!