ಉದಯವಾಹಿನಿ, ಮಂಗಳೂರು: ಶಸಾ್ತ್ರಸ್ತ್ರ ತ್ಯಜಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎದುರು ಶರಣಾದ ನಕ್ಸಲೀಯರ ಶರಣಾಗತಿ ಪ್ರಕ್ರಿಯೆ ಬಗ್ಗೆ ಮಾಜಿ ನಿವೃತ್ತ ಐಪಿಎಸ್‌‍ ಅಧಿಕಾರಿ ಹಾಗೂ ತಮಿಳುನಾಡಿನ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಅನುಮಾನ ವ್ಯಕ್ತಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದ ಇತ್ತೀಚಿಗೆ ನಡೆದ ನಕ್ಸಲ್‌ ಶರಣಾಗತಿ, ನಕ್ಸಲರು ಶರಣಾಗುವುದಾದರೆ ಅದಕ್ಕೆ ನಾನಾ ರೀತಿಯ ಕಾನೂನು ಪ್ರಕ್ರಿಯೆಗಳು ನಡೆಯುತ್ತವೆ. ಆದರೆ ಇಲ್ಲಿ ನಿಯಮಗಳನ್ನು ಉಲ್ಲಂಘಿಸಿ ಶರಣಾಗತಿ ಪ್ರಕ್ರಿಯೆ ನಡೆದಿದೆ ಎಂದು ಅವರು ಆರೋಪಿಸಿದರು.

ಕೆಲವು ದಿನಗಳ ಹಿಂದೆ ನಕ್ಸಲ್‌ ನಿಗ್ರಹದಳ(ಎಎನ್‌ಎಫ್‌)ದವರು ನಡೆಸಿದ ಎನ್‌ಕೌಂಟರ್‌ನಲ್ಲಿ ಮೃತಪಟ್ಟಿದ್ದ ವಿಕ್ರಮ್‌ ಗೌಡ ಅವರಿಗೆ ಸೇರಿದ್ದು ಎನ್ನಲಾದ ಆಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ಲಾಗಿದೆ. ಇದಕ್ಕೆ ಸರ್ಕಾರದ ಬಳಿ ಉತ್ತರವಿದೆಯೇ ಎಂದು ಅಣ್ಣಾಮಲೈ ಪ್ರಶ್ನೆ ಮಾಡಿದ್ದಾರೆ. ನಕ್ಸಲೀಯರು ಶರಣಾಗುವುದು ಎಂದರೆ ಅದು ನಂಬಿದ ತತ್ವ ಮತ್ತು ಸಿದ್ದಾಂತಕ್ಕೆ ಮಾಡಿದ ಮೋಸ. ದುಡಿಯುವ ಜನರಿಗೆ ದ್ರೋಹ ಮಾಡಿದಂತೆ. ದುಡ್ಡು ಮಾಡಲು ಹೋಗುತ್ತಾರೆ ಎಂದು ಜನರು ಆಡಿಕೊಳ್ಳುತ್ತಾರೆ. ನಮ ಜೊತೆ ಮಾತುಕತೆಗೆ ಬನ್ನಿ ಎಂದು ಸರ್ಕಾರ ಆಹ್ವಾನಿಸುತ್ತಿದೆ. ಲಕ್ಷಗಟ್ಟಲೇ ಹಣ ಕೊಡುತ್ತೇವೆ ಎನ್ನುತ್ತಾರೆ. ನಾವು ಸರ್ಕಾರದ ಪ್ಯಾಕೇಜ್‌ ಒಪ್ಪಿಕೊಂಡು ಶರಣಾಗುವುದೆಂದರೆ ನಮನ್ನು ನಾವು ಮಾರಿಕೊಂಡಂತೆ ಎಂದು ವಿಕ್ರಮ್‌ ಗೌಡ ಹೇಳಿರುವ ಆಡಿಯೋ ಬಹಿರಂಗಗೊಂಡಿದೆ. ಇದಕ್ಕೆ ಸರ್ಕಾರ ಉತ್ತರ ಕೊಡಬೇಕೆಂದು ಒತ್ತಾಯ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!