ಉದಯವಾಹಿನಿ, ಬೆಂಗಳೂರು : ಕರ್ನಾಟಕ ಪತ್ರಕರ್ತರ ಸಹಕಾರ ಸಂಘ ವಿಶಿಷ್ಟವಾಗಿ ಹೊರತಂದಿರುವ 2025ರ ಕ್ಯಾಲೆಂಡರ್ನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಕ್ರಾಂತಿ ಹಬ್ಬದ ದಿನವಾದ ಇಂದು ನಗರದಲ್ಲಿ ಬಿಡುಗಡೆ ಮಾಡಿದರು. ಗೃಹ ಕಚೇರಿ ಕಾವೇರಿಯಲ್ಲಿ ಕ್ಯಾಲೆಂಡರ್ ಬಿಡುಗಡೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಂಘಕ್ಕೆ 75 ವರ್ಷ ಪೂರೈಸಿದ್ದೀರಿ ಎಂಬುದೇ ಹೆಗ್ಗಳಿಕೆ. ಪತ್ರಕರ್ತರ ಸಹಕಾರ ಸಂಘಕ್ಕೆ ಒಳ್ಳೆಯದಾಗಲಿ, ಎಲ್ಲ ನಿರ್ದೇಶಕರಿಗೆ ಸಕ್ರಾಂತಿ ಶುಭಾಶಯಗಳು ಎಂದು ಹಾರೈಸಿದರು.
ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ 75ನೇ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ನಾನು ತುಂಬಾ ಸಂತೋಷದಿಂದ ಬರುತ್ತೇನೆ. ಬಜೆಟ್ ಹಿನ್ನೆಲೆಯಲ್ಲಿ ಸ್ವಲ್ಪ ಬ್ಯುಸಿಯಾಗಿದ್ದು, ನನಗೆ ತುಸು ಸಮಯ ಕೊಡಿ ಎಂದು ಹೇಳಿದರು.
ಇದೇ ವೇಳೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್, ಶಾಸಕ ರಘುಮೂರ್ತಿ, ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅವರ ಪತ್ರಕರ್ತರ ಸಹಕಾರ ಸಂಘಕ್ಕೆ ಶುಭ ಹಾರೈಸಿದರು.

Leave a Reply

Your email address will not be published. Required fields are marked *

error: Content is protected !!