ಉದಯವಾಹಿನಿ, ಚೆನ್ನೈ: ತಮಿಳುನಾಡಿನ ದೇವಸ್ಥಾನವೊಂದರ ವಠಾರದಲ್ಲಿ ಮಲಗಿದ್ದ ಮಹಿಳೆಯ ಉಡುಪಿನೊಳಗೆ ವ್ಯಕ್ತಿಯೊಬ್ಬ ಕೈ ಹಾಕಿದ ಘಟನೆ ಬೆಳಕಿಗೆ ಬಂದಿದೆ. ತಮಿಳುನಾಡಿನ ತಿರುಚೆಂಡೂರಿನ ದೇವಸ್ಥಾನದ ಬಳಿ ಈ ಘಟನೆ ನಡೆದಿದ್ದು, ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ತಿರುಚೆಂಡೂರು ದೇವಸ್ಥಾನಕ್ಕೆ ತೀರ್ಥಯಾತ್ರೆಗೆಂದು ಮಹಿಳೆ ಬಂದಿದ್ದು, ದೇಗುಲದ ಬಳಿ ನಿದ್ದೆಗೆ ಜಾರಿದ್ದರು. ಮಹಿಳೆ ಗಾಢ ನಿದ್ದೆಯಲ್ಲಿದ್ದ ಸಂದರ್ಭದಲ್ಲಿ ಅಲ್ಲಿಗೆ ಬಂದ ವ್ಯಕ್ತಿ ಮೊದಲು ಆಕೆಯ ಬ್ಯಾಗ್‌ನಿಂದ ಫೋನ್ ಕದ್ದಿದಾನೆ. ನಂತರ ಆಕೆಯ ಉಡುಪಿನೊಳಗೆ ಕೈ ಹಾಕಿದ್ದಾನೆ. ಈ ಎಲ್ಲಾ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆರೋಪಿಯನ್ನು ಈ ಹಿಂದೆ ಗಲಾಟೆ ಮಾಡಿದ್ದಕ್ಕಾಗಿ ಬಸ್‌ನಿಂದ ತಳ್ಳಲಾಗಿತ್ತು ಎಂದು ತಿಳಿದುಬಂದಿದೆ.
