ಉದಯವಾಹಿನಿ, ತುಮಕೂರು: ತುಮಕೂರಿನ ಜೂನಿಯರ್ ಕಾಲೇಜು ಮೈದಾನದಲ್ಲಿ ಸಿರಿಧಾನ್ಯ ಹಬ್ಬದಲ್ಲಿ ಪಾಲ್ಗೊಂಡಿದ್ದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ತುಮಕೂರು ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಮತ್ತು ಮಹಾನಗರ ಪಾಲಿಕೆ ಆಯುಕ್ತ ಬಿ.ವಿ. ಅಶಿಜಾ ಅವರಿಗೆ ಸೀರೆ ಉಡುಗೊರೆಯಾಗಿ ನೀಡಿದ್ದಾರೆ.
ಸಿರಿಧಾನ್ಯ ಹಬ್ಬಕ್ಕೆ ಚಾಲನೆ ನೀಡಿದ ನಂತರ ವಿವಿಧ ಮಳಿಗಳನ್ನು ವೀಕ್ಷಿಸುತ್ತಿದ್ದ ಸಚಿವ ಪರಮೇಶ್ವರ್ ಇಳಕಲ್ ಸೀರೆ ಮಳಿಗೆ ಬಳಿಗೆ ತೆರಳಿದ್ದಾರೆ. ತಮ್ಮ ಪತ್ನಿ ಕನ್ನಿಕಾ ಪರಮೇಶ್ವರಿ ಅವರಿಗೆ ಇಳಕಲ್ ಸೀರೆ ಖರೀದಿಸಿದ್ದಾರೆ. ಅಷ್ಟೇ ಅಲ್ಲದೆ ತಮ್ಮೊಂದಿಗೆ ಮಳಿಗೆ ವೀಕ್ಷಿಸಲು ಬಂದಿದ್ದ ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಅವರಿಗೂ ಸೀರೆ ಕೊಡಿಸಿದ್ದಾರೆ. ತಮ್ಮೊಂದಿಗೆ ಇದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್ ಅವರ ಪತ್ನಿ, ತುಮಕೂರು ನಗರ ಪಾಲಿಕೆ ಆಯುಕ್ತ ಅಶಿಜಾ ಅವರಿಗೂ ಸೀರೆ ಖರೀದಿಸಿ ಕೊಟ್ಟು ಕಳಿಸಿದ್ದಾರೆ.
