ಉದಯವಾಹಿನಿ, ಬೆಂಗಳೂರು: ಗುತ್ತಿಗೆದಾರರೇ ಒಂದು ವರ್ಷ ಕೆಲಸ ಮಾಡಬೇಡಿ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಕರೆ ನೀಡಿದ್ದಾರೆ.ನಾನು ೬೦% ಕಮಿಷನ್ ಆರೋಪ ಮಾಡಿದಾಗ ಸರ್ಕಾರ, ಸಿಎಂ, ದಾಖಲೆ ಕೊಡಿ ಅಂತ ಹೇಳಿದ್ರು. ಹಂಗಾಮಿ ಕಂಟ್ರ್ಯಾಕ್ಟರ್ ಅಸೋಸಿಯೇಷನ್ ಅಧ್ಯಕ್ಷರು ಏನ್ ಹೇಳಿದ್ದಾರೆ. ಪರ್ಸೆಂಟೇಜ್ ಎಷ್ಟು ಇದೆ ಅಂತ ಅವರೇ ಹೇಳಿದ್ದಾರೆ. ಇದಕ್ಕಿಂತ ದಾಖಲಾತಿ ಸಾಕ್ಷಿ ಬೇಕಾ ಸಿಎಂಗೆ ಎಂದು ಕಿಯೋನಿಕ್ಸ್ ವೆಂಡರ್ಸ್‌ಗಳಿಗೆ ದಯಾ ಮರಣಕ್ಕೆ ಪತ್ರ ಬರೆದಿರುವ ವಿಚಾರವಾಗಿ ಮಾತನಾಡಿ ಸರ್ಕಾರಕ್ಕೆ ತಿರುಗೇಟು ನೀಡಿದರು.

ಯಾರು ತಪ್ಪು ಮಾಡಿದ್ದಾರೋ ಅವರ ಮೇಲೆ ಕ್ರಮ ತೆಗೆದುಕೊಳ್ಳಿ. ಪ್ರಿಯಾಂಕ್ ಖರ್ಗೆ, ಶರತ್ ಬಚ್ಚೇಗೌಡಗೆ ಹೇಳ್ತೀನಿ. ತಪ್ಪು ಮಾಡಿದವರ ಮೇಲೆ ಆಕ್ಷನ್ ತಗೊಳ್ಳಿ. ೧೮ ತಿಂಗಳಲ್ಲಿ ಮಾಡಿದ ಕೆಲಸಕ್ಕೆ ಪೇಮೆಂಟ್ ಕೊಡದೇ ಹೋದರೆ ಅವರ ಬದುಕು ಏನಾಗಬೇಕು? ತಪ್ಪು ಮಾಡಿದವನಿಗೆ ಏನ್ ಬೇಕೋ ಕ್ರಮ ಮಾಡಿ.
ಜನಪ್ರತಿನಿಧಿಗಳ ಅಕ್ರಮ ಮಾಡಿದ್ರೆ ಅವರ ಮೇಲೆ ಆಕ್ಷನ್ ತಗೊಳ್ಳಿ. ತನಿಖೆ ನಡೆ ವಾಸ್ತವಾಂಶ ಹೊರಗೆ ತೆಗೆಯೋಕೆ ಎಷ್ಟು ತಿಂಗಳು ಬೇಕು ವರ್ಷಗಳೇ ಬೇಕಾ ಕಿಯೋನಿಕ್ಸ್ ವೆಂಡರ್ಸ್‌ಗಳಿಗೆ ಹಣ ಬಿಡುಗಡೆಗೆ ಆಗ್ರಹಿಸಿದರು.

ಗುತ್ತಿಗೆದಾರರೇ ಒಂದು ವರ್ಷ ಕೆಲಸ ಮಾಡಬೇಡಿ. ಈ ಸರ್ಕಾರದಲ್ಲಿ ಸಾರ್ವಜನಿಕರ ಹಣ ಲೂಟಿ ಆಗ್ತಿದೆ. ಗುತ್ತಿಗೆದಾರರಿಗೆ ಮನವಿ ಮಾಡ್ತೀನಿ. ಗುತ್ತಿಗೆದಾರರು ಈ ರಾಜ್ಯ ಉಳಿಸಬೇಕು ಅಂತ ಇದ್ದರೆ, ಗುತ್ತಿಗೆದಾರರಲ್ಲಿ ಒಗ್ಗಟ್ಟು ಇದ್ದರೆ ಒಂದು ವರ್ಷ ಗುತ್ತಿಗೆದಾರರು ಯಾರು ಕೆಲಸ ಮಾಡಬೇಡಿ. ಈ ಸರ್ಕಾರದವರು ಅಂಧ್ರದವರನ್ನೋ ಯಾರನ್ನ ಕರೆದುಕೊಂಡು ಮಾಡಿಸಿಕೊಂಡು ಬರ್ತಾರೋ, ಪ್ಯಾಕೇಜ್ ಕೊಟ್ಟು ಮಾಡಿಸ್ತಾರೋ ನೋಡೋಣ. ಬರಲಿ ಯಾರು ಬಂದು ಮಾಡ್ತಾರೋ ಮಾಡಲಿ. ರಾಜ್ಯದಲ್ಲಿ ಕೆಟ್ಟ ಆಡಳಿತ ನಡೆಯುತ್ತಿದೆ.

Leave a Reply

Your email address will not be published. Required fields are marked *

error: Content is protected !!