ಉದಯವಾಹಿನಿ, ಕೆ.ಆರ್. ಪುರ: ಚಾಮರಾಜಪೇಟೆ ಯಲ್ಲಿ ಹಸುವಿನ ಕೆಚ್ಚಲು ಕೊಯ್ದು ಪಾಪದ ಕೃತ್ಯ ಎಸಗಿರುವ ದುಷ್ಕರ್ಮಿಯ ಎರಡು ಕೈಗಳನ್ನು ಕತ್ತರಿಸಿ ಕಠಿಣ ಶಿಕ್ಷೆಗೆ ಗುರಿಪಡಿಸುವಂತೆ ಬಿಜೆಪಿ ರಾಜ್ಯ ಪ್ರಧಾನಕಾರ್ಯದರ್ಶಿ ಹಾಗೂ ಎನ್.ಎಸ್.ನಂದೀಶ್ ರೆಡ್ಡಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು. ತಮ್ಮ ಸ್ವ -ಗೃಹದಲ್ಲಿ ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ಹಸುಗಳಿಗೆ ಪೂಜೆ ಸಲ್ಲಿಸಿ ಕಿಚ್ಚು ಹಾಯಿಸಿ ಮಾತನಾಡಿದರು.ಸಂಕ್ರಾಂತಿ ಹಬ್ಬದ ಸಂಭ್ರಮದ ಹೊತ್ತಿನಲ್ಲಿ ಭಾರತದಲ್ಲಿ ತಾಯಿಯಂತೆ ಪೂಜಿಸುವ ಗೋಮಾತೆಯ ಕೆಚ್ಚಲು ಕೊಯ್ದರಿವುದು ಅಮಾನವೀಯವಾಗಿದೆ. ಇಂತಹ ಹೀನ ಕೃತ್ಯ ಎಸಗಿರುವ ಆರೋಪಿಗೆ ಕಠಿಣ ಶಿಕ್ಷೆ ನೀಡುವ ಬದಲು ಆರೋಪಿಯನ್ನು ಸರ್ಕಾರ ಬುದ್ಧಿಮಾಂದ್ಯ ಎಂದು ಸಮರ್ಥನೆ ಮಾಡಿಕೊಳ್ಳುತ್ತಿರುವುದು ನಾಚಿಕೆಗೇಡು. ಇಂತಹ ಯಾವುದೇ ಘಟನೆಗಳು ಸಂಭವಿಸಿದಾಗ ಈ ರೀತಿಯ ಹೇಳಿಕೆ ನೀಡುವುದು ಕಾಂಗ್ರೆಸ್ ಸರ್ಕಾರದ ವಾಡಿಕೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಯೊಬ್ಬ ಮನುಷ್ಯ ಜನ್ಮತಾಳಿದಾಗ ತಾಯಿ ಎದೆ ಹಾಲು ಕುಡಿದು ನಂತರ ಜೀವನಪರ್ಯಂತ ಯಾವುದೋ ಒಂದು ರೂಪದಲ್ಲಿ ಹಸುವಿನ ಕುಡಿದು ಜೀವಿಸಬೇಕು. ಆದರೆ ಗೋಮಾತೆಯ ಕೆಚ್ಚಲು ಕೊಯ್ದಿರುವುದು ಕ್ಷಮಿಸಲಾರದಂತಹ ಘನಘೋರ ಅಪರಾಧವಾಗಿದೆ. ಯಾರೇ ಆಗಲಿ ಮುಂದಿನ ದಿನಗಳಲ್ಲಿ ಇಂತಹ ಹೀನಾ ಕೃತ್ಯಕ್ಕೆ ಕೈಹಾಕಬಾರದು. ಅಂತಹ ಘಟನೆ ನಡೆಯದಂತೆ ಗೋಮಾತೆಯ ಕೆಚ್ಚಲಿಗೆ ಕೈ ಹಾಕಿದರೆ. ಕೈ ಹಾಕಿದವನ ಶಾಶ್ವತವಾಗಿ ಎರಡು ಕೈಗಳನ್ನು ಕತ್ತರಿಸುವ ಮೂಲಕ ಕಠಿಣ ವಿಧಿಸಿ ಜೀವನಪರ್ಯಂತ ಕೊರಗುವಂತೆ ಮಾಡಬೇಕು. ದೇಶದ ಜನರಿಗೆ ದೊಡ್ಡ ಸಂದೇಶ ರವಾನಿಸಬೇಕು ಎಂದು ಹೇಳಿದರು.
