ಉದಯವಾಹಿನಿ, ನರಸಿಂಹರಾಜಪುರ: ಪಟ್ಟಣದ ಶಾರದ ವಿದ್ಯಾಮಂದಿರ ಬಳಿ. ಪೀಠೋಪಕರಣಗಳನ್ನು ತಯಾರಿಸುತ್ತಿದ್ದ ಶೆಡ್‌ಗೆ ಮಂಗಳವಾರ ಬೆಳಗಿನ ಜಾವ ಆಕಸ್ಮಿಕ ಬೆಂಕಿ ತಗುಲಿದ್ದು ಪೀಠೋಪಕರಣ ತಯಾರಿಕೆಗಾಗಿ ಸಂಗ್ರಹಿಸಿ ಇಟ್ಟಿದ್ದ ಲಕ್ಷಾಂತರ ಮೌಲ್ಯದ ಸಾಗುವಾನಿ ಮರದ ದಿಮ್ಮಿ ಬೆಂಕಿಗೆ ಆಹುತಿಯಾಗಿದೆ. ವಾರ್ಡ್ ನಂಬರ್ 1 ಶಾರದಾ ವಿದ್ಯಾ ಮಂದಿರ ಬಳಿ ನಾಝಿಮ್ ಎಂಬುವರ ಪೀಠೋಪಕರಣ ತಯಾರಿಸುವ ಶೆಡ್ ಇತ್ತು. ಬೆಂಕಿ ಅವಘಡದಿಂದ ಸುಮಾರು ₹8ಲಕ್ಷಕ್ಕೂ ಹೆಚ್ಚು ಮೊತ್ತದ ಸಾಗುವಾನಿ ಮರದ ದಿಮ್ಮಿ ಸುಟ್ಟು ಹೋಗಿದೆ ಎಂದು ನಾಝಿಮ್ ಪೊಲೀಸರಿಗೆ ದೂರು ನೀಡಿದ್ದು ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ. ಸ್ಥಳಕ್ಕೆ ಕಂದಾಯ ನಿರೀಕ್ಷಕ ಮಂಜುನಾಥ್, ವಾರ್ಡ್ ಸದಸ್ಯೆ ಜುಬೇದಾ, ಅರಣ್ಯ ಇಲಾಖೆಯ ಗೌಸ್ ಮೊಹಿದ್ದೀನ್ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.
