ಉದಯವಾಹಿನಿ, ಬೆಂಗಳೂರು : ರಾಜ್ಯದ ರಾಜಧಾನಿಯಲ್ಲಿ ಬೃಹತ್ ಹಾಗೂ ಆಧುನಿಕ ತಂತ್ರಜ್ಞಾನದ ಜಿಮ್ ಗೆ
ಬಾಲಿವುಡ್ ನಟ ಸೋನು ಸೂದ್ ಹಾಗೂ ಸ್ಯಾಂಡಲ್ ವುಡ್ ಸ್ಟಾರ್ ಧೃವ ಸರ್ಜಾ ಗೆಲ ಚಾಲನೆ ನೀಡಿದರು.
ಒಂದು ಕೋಟಿಗೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಬೆಂಗಳೂರು ನಗರದ ಜಿಮ್ ಪ್ರೀಯರ ಬೇಡಿಕೆಗೆ ತಕ್ಕಂತೆ ಆಧುನಿಕ ಸೌಲಭ್ಯಗಳನ್ನು ಈ ಜಿಮ್ ನಲ್ಲಿ ಕಲ್ಪಿಸಲಾಗಿದೆ.
’ವೈ ಎಫ್ ಸಿ ಜಿಮ್ ’ ತನ್ನ ಗುಣಮಟ್ಟದ ಸೇವೆಯಲ್ಲಿ ಯಾವುದೇ ಹೊಂದಾಣಿಕೆ ಮಾಡಿಕೊಳ್ಳದೆ, ವೈಜ್ಞಾನಿಕ ಜಿಮ್ ಉಪಕರಣಗಳು ಹಾಗೂ ತರಬೇತಿ ನೀಡುತ್ತಿದೆ.
ಬೆಂಗಳೂರಿನ ಸಹಕಾರ ನಗರದಲ್ಲಿ ಈ ಜಿಮ್ ಉದ್ಘಾಟನೆಗೊಂಡಿದೆ. ೩೦,೦೦೦ ಚದರ ಅಡಿಗಳಿಗಿಂತ ಹೆಚ್ಚಿರುವ ಈ ಪ್ರೀಮಿಯಮ್ ತರಬೇತಿ ಕೇಂದ್ರವು ಕರ್ನಾಟಕದ ಅತಿದೊಡ್ಡ ಯು ಎಫ್ ಸಿ ಜಿಮ್ ಆಗಿದೆ.
ಯು ಎಫ್ ಸಿ ಶೈಲಿಯ ಅಕ್ಟಾಗನ್, ಬಾಕ್ಸಿಂಗ್ ಬ್ಯಾಗ್ ರ್ಯಾಕ್, ಮತ್ತು ಪ್ರೀಮಿಯಮ್ ಎಂಎಮ್‌ಎ ಉಪಕರಣಗಳು ಈ ಜಿಮ್ ನ ಆಕರ್ಷಣೆ ಆಗಿವೆ.
ಎಂಎಮ್‌ಎ ಅಭ್ಯಾಸಕ್ಕಾಗಿ ಎಲ್ಲಾ ವಯಸ್ಸಿನವರಿಗೂ ಸೂಕ್ತವಾದ ತರಬೇತಿ ನೀಡಲು ಸೂಕ್ತ ತರಬೇತುದಾರರನ್ನು ನೆಮಕ ಮಾಡಲಾಗಿದೆ. ಪುರುಷ ಮತ್ತು ಮಹಿಳೆಯರಿಗೆ ಜಿಮ್ ಸೇವೆ ಲಭ್ಯವಿದೆ. ಫಂಕ್ಷನಲ್ ಫಿಟ್ನೆಸ್, ಕಾರ್ಡಿಯೋ ತರಬೇತಿ, ಜೊತೆಗೆ ಯೋಗ, ಜುಂಬಾ, ಸ್ಪಿನ್ನಿಂಗ್ ತರಗತಿಗಳನ್ನು ಒಳಗೊಂಡಿದೆ.
