ಉದಯವಾಹಿನಿ , ಉಪ್ಪಿನಬೆಟಗೇರಿ: ‘ಸುಖ ಸಂಪತ್ತು ಕ್ಷಣಿಕ, ಶಾಶ್ವತವಾದ ಸುಖ ಪರಮಾತ್ಮ ಎಂಬುದನ್ನು ತಿಳಿಯಬೇಕು’ ಎಂದು ಉಪ್ಪಿನಬೆಟಗೇರಿ ಮೂರುಸಾವಿರ ವಿರಕ್ತಮಠದ ಕುಮಾರ ವಿರೂಪಾಕ್ಷ ಸ್ವಾಮೀಜಿ ಹೇಳಿದರು.
ಗ್ರಾಮದ ಮೂರುಸಾವಿರ ವಿರಕ್ತಮಠದಲ್ಲಿ ಶ್ರೀಗುರು ವಿರೂಪಾಕ್ಷೇಶ್ವರ ಅಕ್ಕನಬಳಗದ ಸಹಯೋಗದಲ್ಲಿ ಸೋಮವಾರ ಏರ್ಪಡಿಸಿದ್ದ ಮಾಸಿಕ ಶಿವಾನುಭವ ಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಅವರು
ಮಾತನಾಡಿದರು.
‘ಪರಮಾತ್ಮನ ಚೈತನ್ಯದಿಂದ ಶರೀರಕ್ಕೆ ಆತ್ಮ ಬಂದಿದೆ ಎಂದು ಅರಿತರ ಪ್ರಪಂಚದಲ್ಲಿ ನೀವು ಸುಖಿಯಾಗಿರುತ್ತೀರಿ, ಧನ ಮತ್ತು ವಿದ್ಯಾ ಸಂಪತ್ತನ್ನು ವಿನಿಯೋಗಿಸುತ್ತ ಹೋದಂತೆ ಅದು ಇನ್ನಷ್ಟು ಬೆಳೆಯುತ್ತದೆ. ಮಠ-ಮಾನ್ಯಗಳಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ದೊರಕುತ್ತದೆ ಎಂದರು.
ಖೇಡಗಿಯ ಪ್ರಭು ದೇವರು, ನಿರುಪಾದಿ ದೇವರು ಸಾನ್ನಿಧ್ಯ ವಹಿಸಿ ಮಾತನಾಡಿದರು.
ಇದೇ ವೇಳೆ ಮಕ್ಕಳು ವಚನ ಹೇಳಿದರು. ಡಿ.ಐ. ನದಾಫ, ಎಫ್.ವೈ. ಮಡಿವಾಳರ, ಬಸವರಾಜ ಮಸೂತಿ, ಸುನಂದಾ ಮಡಿವಾಳರ, ಮಹಾನಿಂಗ ಆಯಟ್ಟಿ, ಹಸನಸಾಬ್ ನದಾಫ, ಗಂಗಪ್ಪ ತಳವಾರ,
ಈರಯ್ಯ ಗೌರಿಮಠ, ಮೈಲಾರಪ್ಪ ಮಡಿವಾಳರ ಇದ್ದರು.

Leave a Reply

Your email address will not be published. Required fields are marked *

error: Content is protected !!