ಉದಯವಾಹಿನಿ, ಬೆಂಗಳೂರು: ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅತ್ಯಾಚಾರ ಪ್ರಕರಣದಲ್ಲಿ ಜೈಲಿನಲ್ಲಿದ್ದಾರೆ. ಇಂದು ಕೋರ್ಟ್‌ಲ್ಲಿ ಪ್ರಜ್ವಲ್ ರೇವಣ್ಣ ತನ್ನದೇ ಆದ ರಾಸಲೀಲೆಯ ವೀಡಿಯೋವನ್ನು ವೀಕ್ಷಿಸಿದ್ದಾರೆ. ಮುಚ್ಚಿದ ಕೋರ್ಟ್ನಲ್ಲಿ ಪ್ರಜ್ವಲ್ ಹಾಗೂ ಅವರ ಪರ ವಕೀಲರು ಮತ್ತು ತಾಂತ್ರಿಕ ತಜ್ಞರ ತಂಡ ಕೂಡ ವೀಡಿಯೋವನ್ನು ವೀಕ್ಷಿಸಿದೆ.
ಇಂದು (ಜನವರಿ 18) ಬೆಳಗ್ಗೆ, ಅತ್ಯಾಚಾರ ಪ್ರಕರಣದ ಆರೋಪಿ ಪ್ರಜ್ವಲ್ ರೇವಣ್ಣ ಅವರ ವಿಚಾರಣೆ ಮಾಡಲಾಯಿತು. ಪರಪ್ಪನ ಅಗ್ರಹಾರ ಜೈಲಿನಿಂದ ಪ್ರಜ್ವಲ್ ರೇವಣ್ಣ ಅವರನ್ನು ಕರೆ ತಂದು ಮುಚ್ಚಿದ ಕೋರ್ಟ್ನಲ್ಲಿ ವೀಡಿಯೋವನ್ನು ವೀಕ್ಷಿಸಲಾಯಿತು. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಪ್ರಜ್ವಲ್ ಅತ್ಯಾಚಾರದ ವೀಡಿಯೋಗಳನ್ನು ಇಂದು ವೀಕ್ಷಿಸಲಾಗಿದೆ.
ಪ್ರಜ್ವಲ್ ಪರ ವಕೀಲರಾದ ಅರುಣ್ ಅವರು ನ್ಯಾಯಾಲಯದಲ್ಲಿ ವಾದ ಮಂಡಿಸಿ, ಸುದ್ದಿ ವಾಹಿನಿಗಳಲ್ಲಿ ಪ್ರಜ್ವಲ್ ಅವರಿಗೆ ಸಂಬಂಧಿಸಿದ ಯಾವುದೇ ವಿಷಯವನ್ನು ಪ್ರಕಟಿಸದಂತೆ ನಿರ್ದೇಶಿಸಬೇಕು ಎಂದು ಮನವಿ ಮಾಡಿದರು. ಆದರೆ ಕೋರ್ಟ್ ಇದಕ್ಕೆ ಒಪ್ಪಿಗೆ ಸೂಚಿಸಿಲ್ಲ. ಮಾಧ್ಯಮದವರಿಗೆ ಈ ನಿರ್ದೇಶನ ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ.
