ಉದಯವಾಹಿನಿ, ಹುಬ್ಬಳ್ಳಿ : ಕಾಮುಕನೊಬ್ಬ ಯುವತಿಯರನ್ನು ಪ್ರೀತಿಸುವ ನಾಟಕವಾಡಿ ಹಾಗೂ ಮಹಿಳೆಯರನ್ನು ಬುಟ್ಟಿಗೆ ಬೀಳಿಸಿಕೊಂಡು ವಿಡಿಯೋ ಮಾಡಿ ಬ್ಯಾಕ್ ಮೇಲ್ ಮಾಡಿ ಪೊಲೀಸರ ಅತಿಥಿಯಾಗಿದ್ದಾನೆ. ಈ ಕಾಮುಕನನ್ನು ಈಗ ಹುಬ್ಬಳ್ಳಿ ಪೊಲೀಸರು (ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಶರಾವತಿ ನಗರದ ಕೆಇಬಿ ಲೇಔಟ್ ನಿವಾಸಿ ಅಶ್ವಾಕ್ ಜೋಗನ್‌ಕೊಪ್ಪ (38) ಎಂದು ಗುರುತಿಸಲಾಗಿದೆ. ಬಂಧಿತ ಕಾಮುಕ 10ಕ್ಕೂ ಅಧಿಕ ಯುವತಿಯರು, ಮಹಿಳೆಯರು ಹಾಗೂ ಅಪ್ರಾಪ್ರೇಯರ ಜೊತೆ ಪ್ರೀತಿಯ ನಾಟಕವಾಡಿ ಬ್ಯಾಕ್ ಮೇಲ್ ಮಾಡಿದ್ದಾನೆ ಎನ್ನಲಾಗಿದೆ.
ಪ್ರೀತಿಯ ನಾಟಕವಾಡಿ ಲೈಂಗಿಕವಾಗಿ ಬಳಸಿಕೊಂಡು ವಿಡಿಯೋ ಮಾಡಿಕೊಂಡಿದ್ದ. ವಿಡಿಯೋ ಇಟ್ಟುಕೊಂಡು ಹೇಳಿದಂತೆ ಕೇಳಬೇಕು. ಇಲ್ಲವಾದರೆ ವಿಡಿಯೋ ಪ್ರಸಾರ ಮಾಡುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದ ಎನ್ನಲಾಗಿದೆ. ಆರೋಪಿ ಹುಬ್ಬಳ್ಳಿಯ ಟಿಪ್ಪು ನಗರದಲ್ಲಿ ಜೆರಾಕ್ಸ್ ಮತ್ತು ಮೊಬೈಲ್ ರೀಚಾರ್ಜ್ ಸ್ಟೋರ್ ಇಟ್ಟುಕೊಂಡಿದ್ದ ತನ್ನ ಅಂಗಡಿಗೆ ಬಂದ ಯುವತಿಯರು, ಬಾಲಕಿಯರು ಹಾಗೂ ಮಹಿಳೆಯರನ್ನು ಬುಟ್ಟಿಗೆ ಬೀಸಿಕೊಂಡು ಈ ರೀತಿ ಮಾಡುತ್ತಿದ್ದ ಅಪ್ರಾಪ್ತ ಬಾಲಕಿಯೊಬ್ಬಳಿಂದ ಈತನ ವಿರುದ್ಧ ಪ್ರಕರಣ ದಾಖಲಾಗಿತ್ತು ಪೊಲೀಸರು ಕರೆತಂದು ವಿಚಾರಣೆ ನಡೆಸಿದಾಗ ಈತನ ವಿಕೃತ ಮುಖವಾಡ ಕಳಚಿದೆ.
