ಉದಯವಾಹಿನಿ, ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ 8ನೇ ವೇತನ ಆಯೋಗ ರಚನೆಗೆ ಒಪ್ಪಿಗೆ ನೀಡಲಾಗಿದೆ. ಕೇಂದ್ರ ಸರ್ಕಾರಿ ನೌಕರರ ವೇತನ, ಭತ್ಯೆ. ಪಿಂಚಣಿಗಳ ಪರಿಷ್ಕರಣೆಗೆ 8ನೇ ವೇತನ ಆಯೋಗ ರಚನೆಯಾಗಲಿದೆ. ವೇತನ ಆಯೋಗ ತನ್ನ ವರದಿಯನ್ನು ಸಲ್ಲಿಕೆ ಮಾಡಿದ ಬಳಿಕ ಕೇಂದ್ರ ಸರ್ಕಾರಿ ನೌಕರರ ವೇತನ ಎಷ್ಟು ಹೆಚ್ಚಳವಾಗಲಿದೆ? ಎಂಬ ಲೆಕ್ಕಾಚಾರಗಳು ಈಗ ಆರಂಭವಾಗಿವೆ.8ನೇ ವೇತನ ಆಯೋಗದ ವರದಿ ಜಾರಿ ಬಳಿಕ ಕೇಂದ್ರ ಸರ್ಕಾರಿ ನೌಕರರ ವೇತನ ಪರಿಷ್ಕರಣೆಯಾಗಲಿದೆ. ಅದರಲ್ಲೂ ವೇತನ ಹೆಚ್ಚಳದಲ್ಲಿ ಫಿಟ್ಟಿಂಟ್ ಸೌಲಭ್ಯ ಪ್ರಮುಖ ಪಾತ್ರವಹಿಸಲಿದೆ. ನೌಕರರ ಮಾಸಿಕ ಕನಿಷ್ಠ
ವೇತನವು ಎಷ್ಟು ಹೆಚ್ಚಳವಾಗಲಿದೆ.ಪ್ರಸ್ತುತ ಮಾಸಿಕ ಕನಿಷ್ಠ ವೇತನಕ್ಕೆ ಫಿಟಿಂಟ್ ಸೌಲಭ್ಯವನ್ನು ಸೇರಿಸಿದ ಬಳಿಕ ಕೇಂದ್ರ ಸರ್ಕಾರಿ ನೌಕರರ ವೇತನ ಎಷ್ಟು ಹೆಚ್ಚಾಗಲಿದೆ? ಎಂಬ ಮಾಹಿತಿ ಸಿಗಲಿದೆ. 8ನೇ ವೇತನ ಆಯೋಗದ ಶಿಫಾರಸಿನ ಅನ್ವಯ ಫಿಟೆಂಟ್ ಸೌಲಭ್ಯ 2.28ರಷ್ಟು ಎಂದು ನಿರೀಕ್ಷೆ ಮಾಡಲಾಗಿದೆ.
