ಉದಯವಾಹಿನಿ, ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ಮೇಲೈ ಸುಳಿಗಾಳಿ ಉಂಟಾಗಿರುವ ಪರಿಣಾಮ ರಾಜ್ಯದಲ್ಲಿ ನಿನ್ನೆಯಿಂದ ಮೋಡ ಕವಿದ ವಾತಾವರಣವಿದ್ದು, ಇಂದು ರಾಜ್ಯದ ದಕ್ಷಿಣ ಭಾಗದ ಕೆಲವು ಜಿಲ್ಲೆಗಳಲ್ಲಿ ಅಕಾಲಿಕ ಮಳೆಯಾಗಿದೆ. ಬೆಳಿಗ್ಗೆ ರಾಜಧಾನಿ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಸುಮಾರು ಹತ್ತು ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಅಕಾಲಿಕ ಮಳೆಯಾಗಿದೆ.
ಬೆಳಗಿನ ಜಾವ ಹಾಸನ, ಕೊಡಗು, ಮೈಸೂರು, ಮಂಡ್ಯ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಅಲ್ಪ ಪ್ರಮಾಣದ ಮಳೆಯಾಗಿದೆ. ಅಂದರೆ ಸುಮಾರು 5ರಿಂದ 15 ಮಿ.ಮೀ.ವರೆಗೆ ಮಳೆಯಾಗಿದೆ.
ಚಳಿಗಾಲದಲ್ಲಿ ಮಳೆಯಾಗುವುದು ವಿರಳ. ವಾತಾವರಣದಲ್ಲಿ ಮಳೆಗೆ ಪೂರಕವಾದ ಪರಿಚಲನೆಗಳು ಉಂಟಾದಾಗ ಮಾತ್ರ ಮಳೆಯಾಗುತ್ತದೆ. ಜನವರಿಯಲ್ಲಿ ಮಳೆ ಬೀಳುವುದು ಅಪರೂಪ. ಆದರೂ ಈ ತಿಂಗಳ ವಾಡಿಕೆ ಪ್ರಮಾಣ ಅತ್ಯಂತ ಕಡಿಮೆ ಇದೆ.
ಧಾನ್ಯಗಳ ಒಕ್ಕಣೆ ಸಮಯವಾಗಿರುವುದರಿಂದ ಅಕಾಲಿಕ ಮಳೆಯಿಂದ ರೈತರಿಗೆ ಪ್ರತಿಕೂಲವಾಗಿದೆ. ಆದರೆ, ಭಾರಿ ಮಳೆಯಾಗದೆ, ಹಗುರ ಮಳೆಯಾಗಿದ್ದು, ನಿರಂತರವಾಗಿ ಹೆಚ್ಚು ದಿನ ಮುಂದುವರೆಯುವ ಸಾಧ್ಯತೆ ವಿರಳವಾಗಿರುವುದರಿಂದ ಬೆಳೆ ಸಂರಕ್ಷಣೆ ಮಾಡಿಕೊಳ್ಳಬಹುದಾಗಿದೆ.ರ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಗಳಿವೆ.
