ಉದಯವಾಹಿನಿ: ಬೆಂಗಳೂರು: ಬಾಹ್ಯಾಕಾಶ ದಲ್ಲಿ ಯಶಸ್ವಿಯಾಗಿ ಡಾಕಿಂಗ್ ಮಾಡಲಾದ ಸ್ಪಾಡೆಕ್ಸ್ ಉಪ್ರಗ್ರಹದ ಮತ್ತಷ್ಟು ಪರಿಪೂರ್ಣ ನಿಖರತೆಗೆ ಹೆಚ್ಚಿನ ಡಾಕಿಂಗ್ ಪ್ರಯೋಗಗಳಿಗಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ-ಇಸ್ರೋ ಸಜ್ಜಾಗಿದೆ.
ಜನವರಿ ೧೬ರಂದು ಸ್ಪಾಡೆಕ್ಸ್ ಉಪಗ್ರಹದ ಎರಡು ಸಾಧನಗಳನ್ನು ಬಾಹ್ಯಾಕಾಶದಲ್ಲಿ ಯಶಸ್ವಿಯಾಗಿ ಡಾಕಿಂಗ್ ಮಾಡಿತ್ತು. ಲಿಂಕ್ ಮಾಡಲಾದ ಉಪಗ್ರಹಗಳೊಂದಿಗೆ ಹೆಚ್ಚುವರಿ ಡಾಕಿಂಗ್ ಪ್ರಯತ್ನಗಳಿಗೆ ತಯಾರಿ ನಡೆಸುತ್ತಿದೆ, ಅದರ ಸ್ವಯಂಚಾಲಿತ ಡಾಕಿಂಗ್ ಸಾಮಥ್ರ್ಯಗಳಲ್ಲಿ ಹೆಚ್ಚಿನ ನಿಖರತೆಯ ಸಾಧಿಸುವತ್ತ ಗಮನಹರಿಸಿದೆ
ಬಾಹ್ಯಾಕಾಶ ಡಾಕಿಂಗ್ ಪ್ರಯೋಗದ ಸ್ಪಾಡೆಕ್ಸ್ ನೇತೃತ್ವದ ಯುಆರ್ ರಾವ್ ಉಪಗ್ರಹ ಕೇಂದ್ರದ ನಿರ್ದೇಶಕ ಎಂ ಶಂಕರನ್ ಪ್ರತಿಕ್ರಿಯಿಸಿ ಮುಂದಿನ ಹಂತದ ಪ್ರಯೋಗಗಳೊಂದಿಗೆ ಮುಂದುವರಿಯುವ ಮೊದಲು ಬಾಹ್ಯಾಕಾಶ ಸಂಸ್ಥೆ ಡಾಕಿಂಗ್ ನಿಖರತೆಯ ವಿವರವಾದ ಮೌಲ್ಯಮಾಪನ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!